ಮುಲ್ಕಿ: ಹಳೆಯಂಗಡಿ ಸಮೀಪದ ಚೇಳಾಯರು ಅಣೆಕಟ್ಟಿನಲ್ಲಿ ಕಸ ಕಡ್ಡಿ ಮರ ಮುಟ್ಟುಗಳು ತುಂಬಿಕೊಂಡಿದ್ದು ನೀರು ಸರಾಗ ಹರಿಯದೆ ಪರಿಸರದ ಕೆಲ ಕಡೆ ನೆರೆ ಇನ್ನೂ ಇಳಿದಿಲ್ಲ ಎಂದು ಸ್ಥಳೀಯರು ಹೇಳಿದ್ದಾರೆ.
ಮುಲ್ಕಿ ತಾಲೂಕಿನ ಪಂಜ ಕೊಯಿಕುಡೆಯ ಉಲ್ಯದಲ್ಲಿ ಭಾರೀ ಮಳೆಗೆ ನಂದಿನಿ ನದಿ ಉಕ್ಕಿ ಹರಿಯುತ್ತಿದೆ. ಪರಿಣಾಮ ವಾರಗಳ ಕಾಲ ನೆರೆ ಇಳಿಯದೆ ಸ್ಥಳೀಯ ನಿವಾಸಿಗಳು ತೊಂದರೆಗೊಳಗಾಗಿದ್ದಾರೆ ಹಾಗೂ ಕೃಷಿ ನಾಶವಾಗಿದೆ. ಇದಕ್ಕೆಲ್ಲ ಚೇಳಾಯರು ಅಣೆಕಟ್ಟಿನಲ್ಲಿ ನೀರು ಸರಾಗವಾಗಿ ಹಾದುಹೋಗದೆ ಇರುವುದು ಎಂದು ಸ್ಥಳೀಯರು ದೂರಿದ್ದಾರೆ.
ಈ ಭಾಗದಲ್ಲಿ ಕಳೆದ ತಿಂಗಳುಗಳ ಹಿಂದೆ ಅಕ್ರಮ ಮರಳುಗಾರಿಕೆ ನಡೆದಿತ್ತು. ದಂಧೆಕೋರರು ಮರಳುಗಾರಿಕೆಗೆ ತಮ್ಮ ವಾಹನಗಳನ್ನು ನದಿಗೆ ಇಳಿಸಲು ಅಡ್ಡವಾಗಿದ್ದ ಮರಗಳನ್ನು ಕಡಿದು ನದಿಗೆ ದೂಡಿದ್ದಾರೆ. ಆಣೆಕಟ್ಟದ ಕಿಂಡಿಯಲ್ಲಿ ದೊಡ್ಡಗಾತ್ರದ ಕಲ್ಲು ಸಹಿತ ಮರಗಳು ಸಿಲುಕಿ ನೀರು ಹರಿದು ಹೋಗಲು ಸಾಧ್ಯವಾಗುತ್ತಿಲ್ಲ. ಕೂಡಲೇ ಸಂಬಂಧಪಟ್ಟ ಇಲಾಖೆ ಆಣೆಕಟ್ಟಿನ ಕಸ ಕಡ್ಡಿ ಮರ ಮುಟ್ಟುಗಳನ್ನು ತೆಗೆದು ನೀರಿನ ಸಂಚಾರ ಸುಗಮಗೊಳಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
Kshetra Samachara
17/07/2022 06:49 pm