ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಳ್ಕುಂಜೆ: ಭಾರಿ ಮಳೆಗೆ 28 ಮನೆಗಳು ಜಲಾವೃತ; ಅಲ್ಪ ಸ್ವಲ್ಪ ಹಾನಿ

ಮುಲ್ಕಿ: ತಾಲೂಕು ವ್ಯಾಪ್ತಿಯಲ್ಲಿ ಶನಿವಾರ ಭಾರೀ ಮಳೆ ಸುರಿದಿದ್ದು ಅಲ್ಪ ಸ್ವಲ್ಪ ಹಾನಿ ಸಂಭವಿಸಿದೆ ಭಾರೀ ಮಳೆಗೆ ಬಳ್ಕುಂಜೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಕರ್ನೀರೆ ಸಮೀಪದ ಪಿಲಿಬೆಟ್ಟು ಎಂಬಲ್ಲಿ ಕೃತಕ ನೆರೆಯಿಂದ 28 ಕುಟುಂಬಗಳು ತತ್ತರಿಸಿದ್ದು ಯುವ ಕಾಂಗ್ರೆಸ್ ನಾಯಕ ಮಿಥುನ್ ರೈ ನೇತೃತ್ವದಲ್ಲಿ ಸ್ಥಳಕ್ಕೆ ಧಾವಿಸಿ ಪರಿಹಾರ ಕಾರ್ಯಾಚರಣೆಗಳನ್ನು ಮಾಡಿದ್ದಾರೆ. ಅದರಲ್ಲಿ ಎರಡು ಕುಟುಂಬಗಳನ್ನು ರಕ್ಷಿಸಲಾಗಿದ್ದು ಸ್ಥಳಾಂತರಿಸಲಾಗಿದೆ.

ಕಾರ್ಯಾಚರಣೆಯಲ್ಲಿ ಮುಲ್ಕಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮೋಹನ್ ಕೋಟ್ಯಾನ್, ಕೆಪಿಸಿಸಿ ಕೋ ಆರ್ಡಿನೇಟರ್ ವಸಂತ್ ಬೆರ್ನಾಡ್, ಯುವ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಪೂಜಾರ, ಮುಲ್ಕಿ ನಪಂ ಸದಸ್ಯ ಮಂಜುನಾಥ ಕಂಬಾರ, ಸ್ಥಳೀಯರಾದ ನೆಲ್ಸನ್ ಲೋಬೋ ಮತ್ತಿತರರು ಭಾಗವಹಿಸಿದ್ದರು.

ಭಾರಿ ಮಳೆಗಾಳಿಗೆ ಕಿನ್ನಿಗೋಳಿ ಪಟ್ಟಣ ಪಂಚಾಯತ್ ವ್ಯಾಪ್ತಿಯ ತಾಳಿ ಪಾಡಿ ಗ್ರಾಮದ ಗೋಳಿ ಜೋರಾ ಕಲ್ಪಂಡೆ ಲಲಿತ ಶೆಟ್ಟಿಗಾರರವರ ಆವರಣ ಗೋಡೆ ಕುಸಿದಿದೆ.

ಗುತ್ತಕಾಡು ಕೊಲ್ಲೂರು ಪದವು ರಸ್ತೆ ಪಕ್ಕದ ಕೆರೆಯ ತಡೆಗೋಡೆ ಕುಸಿದಿದೆ, ಸ್ಥಳಕ್ಕೆ ಕಿನಿಗೊಳಿ ಪಟ್ಟಣ ಪಂಚಾಯಿತಿ ಮುಖ್ಯ ಅಧಿಕಾರಿ ಸಾಯಿಶ್ ಚೌಟ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು .ಕೆರೆ ಬದಿಗೆ ತಾತ್ಕಾಲಿಕ ನೆಲೆಯಲ್ಲಿ ಎಚ್ಚರಿಕೆ ರಿಬ್ಬನ್ ಹಾಕಿ ಬ್ಯಾನರ್ ಅಳವಡಿಸಲಾಗಿದೆ.

Edited By : PublicNext Desk
Kshetra Samachara

Kshetra Samachara

09/07/2022 06:30 pm

Cinque Terre

2.99 K

Cinque Terre

0

ಸಂಬಂಧಿತ ಸುದ್ದಿ