ಮುಲ್ಕಿ: ಮುಲ್ಕಿ ತಾಲೂಕು ವ್ಯಾಪ್ತಿಯಲ್ಲಿ ಗುರುವಾರ ಭಾರೀ ಮಳೆಯಾಗಿದ್ದು ಕೆಲವೆಡೆ ಕೃತಕ ನೆರೆ ಉಂಟಾಗಿದೆ. ತಾಲ್ಲೂಕು ವ್ಯಾಪ್ತಿಯ ಕುಬೆವೂರು ಶಿಮಂತೂರು ದೇವಸ್ಥಾನದ ರಸ್ತೆ ಭಾರೀ ಮಳೆಗೆ ಜಲಾವೃತವಾಗಿದ್ದು ಸಂಚಾರಕ್ಕೆ ತೊಂದರೆಯಾಗಿದೆ.
ರಾಷ್ಟ್ರೀಯ ಹೆದ್ದಾರಿ 66ರ ಕೋಲ್ನಾಡು ಹೆದ್ದಾರಿ ಬದಿಯಲ್ಲಿ ಸೂಕ್ತ ಚರಂಡಿ ವ್ಯವಸ್ಥೆ ಇಲ್ಲದೆ ಕೃತಕ ನೆರೆ ಉಂಟಾಗಿ ದಿನೇಶ್ ಎಂಬವರ ಮನೆಗೆ ಮಳೆ ನೀರು ನುಗ್ಗಿದೆ.
ಭಾರೀ ಮಳೆಗೆ ರಾಷ್ಟ್ರೀಯ ಹೆದ್ದಾರಿ 66 ರ ಪಡು ಪಣಂಬೂರು ಕಿರು ಸೇತುವೆ, ಕೋಲ್ನಾಡು ಗುಂಡಾಲ್ ಗುತ್ತು ಬಳಿ ಬೃಹದಾಕಾರದ ಹೊಂಡಗಳು ಉಂಟಾಗಿ ಸಂಚಾರ ದುಸ್ತರವಾಗಿದೆ.
ಕಿಲ್ಪಾಡಿ ಗ್ರಾಮದ ಕೆರೆಕಾಡು ಎಂಬಲ್ಲಿ ಅಮಿತ ರವರ ಸೀಟಿನ ಮನೆಗೆ ಮರ ಬಿದ್ದು ಹಾನಿಯಾಗಿದ್ದು ಮನೆಯಲ್ಲಿ ಯಾರು ಇಲ್ಲದ ಕಾರಣ ಅನಾಹುತ ತಪ್ಪಿದೆ.
ಉಳಿದಂತೆ ತಾಲೂಕು ವ್ಯಾಪ್ತಿಯ ನದಿ ತೀರದ ಪ್ರದೇಶಗಳಾದ ಕಿಲೆಂಜೂರು, ನಡುಗೋಡು, ಪಂಜ ಉಳ್ಯ, ಮಾನಂಪಾಡಿ, ಮಟ್ಟು, ವ್ಯಾಪ್ತಿಯ ತೀರದ ವಾಸಿಗಳಿಗೆ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.
Kshetra Samachara
07/07/2022 06:23 pm