ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ: ಐಕಳ ಹರೀಶ್ ಶೆಟ್ಟಿ ಮನೆಗೆ ಸಂಸದ ನಳಿನ್ ಭೇಟಿ; ಚರ್ಚೆ

ಮುಲ್ಕಿ: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷ ಐಕಳ ಹರಿಶ್ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಒಕ್ಕೂಟದ ಸಭೆಯಲ್ಲಿ ನಿರ್ಣಯಿಸಿದಂತೆ ಬಂಟ ಸಮುದಾಯದ ಶತಾಯುಷಿ ಕಾಸರಗೋಡು ಕರ್ನಾಟಕಕ್ಕೆ ಸೇರಬೇಕು ಎನ್ನುವ ಗಡಿನಾಡ ಹೋರಾಟಗಾರ ಕವಿ ಮತ್ತು ಸ್ವಾತಂತ್ರ್ಯ ಹೋರಾಟಗಾರ ನಾಡೋಜ ಕೈಯ್ಯಾರ ಕಿಞ್ಞಣ್ಣ ರೈ ರವರ ಕುರಿತಾದ ಲೇಖನವನ್ನು ಪಠ್ಯಪುಸ್ತಕದಲ್ಲಿ ಅಳವಡಿಸದೆ ಇರುವುದರ ಬಗ್ಗೆ ಸರಕಾರದ ಗಮನವನ್ನು ಸೆಳೆಯಲು ಮತ್ತು ಪಠ್ಯಪುಸ್ತಕದಲ್ಲಿ ಸೇರ್ಪಡೆಗೊಳಿಸಲು ಒತ್ತಾಯಿಸಿದ ಹಿನ್ನೆಲೆಯಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ರವರು ಕಿನ್ನಿಗೋಳಿ ಯಲ್ಲಿರುವ ಐಕಳ ಹರೀಶ್ ಶೆಟ್ಟಿ ಯವರ ನಿವಾಸಕ್ಕೆ ಭೇಟಿ ನೀಡಿ ವಿಸ್ತೃತ ಚರ್ಚೆಯನ್ನು ನಡೆಸಿದರು.

ನಳಿನ್ ಕುಮಾರ್ ರವರು ಸರಕಾರದ ಶಿಕ್ಷಣ ಸಚಿವ ನಾಗೇಶ್ ಜೊತೆ ದೂರವಾಣಿ ಮೂಲಕ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ ರವರ ಜೊತೆ ಮಾತನಾಡಿಸಿ ಅದರಂತೆ ಪಠ್ಯಪುಸ್ತಕದಲ್ಲಿ ಹಿರಿಯ ಕವಿಯ ಹೆಸರನ್ನು ಹಿಂದಿನಂತೆ ಸೇರ್ಪಡೆಗೊಳಿಸುವ ಬಗ್ಗೆ ನಿರ್ಧಾರಗಳನ್ನು ತೆಗೆದುಕೊಳ್ಳುವ ಭರವಸೆ ನೀಡಿದರು.

ಅದರಂತೆ ಮುಖ್ಯ ಮಂತ್ರಿ ಬಸವರಾಜ್ ಬೊಮ್ಮಾಯಿ ಅವರ ಜೊತೆ ಮಾತನಾಡಿ ಶೀಘ್ರ ಕ್ರಮ ಕೈ ಗೊಳ್ಳುವುದಾಗಿ ತಿಳಿಸಿದರು,

ಈ ಸಂದರ್ಭ ಮಂಗಳೂರಿನ ಆರ್ ಟಿ ಒ ಬಳಿ ಇರುವ ಎ ಬಿ ಶೆಟ್ಟಿ ಸರ್ಕಲ್ ನ್ನು ಕೂಡ ಶೀಘ್ರದಲ್ಲಿ ಅನುಷ್ಠಾನ ಮಾಡುವುದಾಗಿ ಸಂಸದರು ಭರವಸೆಯನ್ನ ನೀಡಿದರು.

Edited By : PublicNext Desk
Kshetra Samachara

Kshetra Samachara

01/07/2022 06:23 pm

Cinque Terre

1.96 K

Cinque Terre

0

ಸಂಬಂಧಿತ ಸುದ್ದಿ