ಮುಲ್ಕಿ: ಮುಲ್ಕಿ ನಗರ ಪಂಚಾಯತ್ ಸ್ವಚ್ಛತೆಗೆ ಪೌರಕಾರ್ಮಿಕರ ಸೇವೆ ಅನನ್ಯವಾಗಿದ್ದು ಪೌರಕಾರ್ಮಿಕರು ಊರಿನ ರಾಯಭಾರಿಗಳು ಎಂದು ಮುಲ್ಕಿ ನಪಂ ಮುಖ್ಯಾಧಿಕಾರಿ ಚಂದ್ರ ಪೂಜಾರಿ ಹೇಳಿದರು.
ಅವರು ಮುಲ್ಕಿ ನಗರ ಪಂಚಾಯತ್ ನಲ್ಲಿ ಪೌರಕಾರ್ಮಿಕ ಸ್ವಚ್ಛತಾ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ನಿವೃತ್ತರಾಗುತ್ತಿರುವ ಸುಂದರ ರವರನ್ನು ನಗರ ಪಂಚಾಯತಿ ವತಿಯಿಂದ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮುಲ್ಕಿ ನ. ಪಂ ಅಧ್ಯಕ್ಷ ಸುಭಾಶ್ ಶೆಟ್ಟಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಸುಂದರ್ ರವರ ಉತ್ತಮ ಸೇವೆ ಬಗ್ಗೆ ಸದಸ್ಯರಾದ ಯೋಗೀಶ್ ಕೋಟ್ಯಾನ್, ವಿಮಲಾ ಪೂಜಾರಿ, ಪುತ್ತುಬಾವ, ಮಂಜುನಾಥ ಕಂಬಾರ ಮತ್ತಿತಾರರು ಮಾತನಾಡಿದರು.
ನಗರ ಪಂಚಾಯಿತಿ ಉಪಾಧ್ಯಕ್ಷ ಸತೀಶ್ ಅಂಚನ್ ಸದಸ್ಯರು, ಸಿಬ್ಬಂದಿ ವರ್ಗ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
30/06/2022 05:09 pm