ಮುಲ್ಕಿ:ಹಳೆಯಂಗಡಿಯ ಕೊಳುವೈಲುನಲ್ಲಿ ಪಂಜರದ ಮೀನು ಕಟಾವು ಮೇಳ ನಡೆಯಿತು. ಪಂಜರದ ಮೀನು ಕೃಷಿ ಕೇಂದ್ರ ಸರಕಾರದ ಯೋಜನೆಯಾಗಿದ್ದು, ಪರಿಶಿಷ್ಟ ಸಮುದಾಯದ ಫಲಾನುಭವಿಗಳನ್ನು ಇದಕ್ಕೆ ಆಯ್ಕೆ ಮಾಡಲಾಗಿತ್ತು. ಕಾರವಾರದಿಂದ ತರಿಸಲಾಗಿದ್ದ ಮೀನು ಮರಿ, ಪಂಜರ ಹಾಗೂ ಆಹಾರವನ್ನು ಸಿಎಂ ಎಫ್ಆರ್ ಐ ಒದಗಿಸಿದ್ದು ಹಳೆಯಂಗಡಿಯ ಕೊಳುವೈಲು ನಂದಿನಿ ನದಿಯಲ್ಲಿ ಕಳೆದ ಡಿಸೆಂಬರ್ ನಲ್ಲಿ ಪಂಜರ ಇರಿಸಲಾಗಿತ್ತು.
ಬರೋಬ್ಬರಿ ಐದು ತಿಂಗಳ ಹಿಂದೆ ಇರಿಸಲಾಗಿದ್ದ ಬಲೆ ಓಡು ಮೀನು ಮರಿ ಸರಾಸರಿ 15 ಗ್ರಾಂ ನವರೆಗೆ ಬೆಳೆದಿರುವುದು ಕುತೂಹಲಕ್ಕೆ ಕಾರಣವಾಗಿದೆ.
ಸುಮಾರು 400 ಕೆಜಿ ಯಷ್ಟು ಮೀನು ದೊರೆತಿದ್ದು, ಇದನ್ನು ಕೆಎಫ್‌ಡಿಸಿ ಮೂಲಕ ಮಾರುಕಟ್ಟೆಗೆ ಪೂರೈಸಲಾಯಿತು. ಇದಕ್ಕೆ ಕೆಜಿಗೆ ಸುಮಾರು 400 ರೂ. ವರೆಗೆ ದೊರೆಯುವ ನಿರೀಕ್ಷೆ ಇದ್ದು, ಈ ಹಣ ಫಲಾನುಭವಿಗಳಿಗೆ ದೊರೆಯಲಿದೆ.
ಈ ಯೋಜನೆ ಎಸ್ಸಿ ಎಸ್ಟಿ ಫಲಾನುಭವಿಗಳಿಗೆ ಉಚಿತವಾಗಿದ್ದು ,ಇತರರು ಆಸಕ್ತಿ ವಹಿಸಿದಲ್ಲಿ ಉಚಿತ ಸಲಹೆ ನೀಡಲು ಸಿಎಂಎಫ್‌ಆರ್‌ಐ ಸಿದ್ದ ಎಂದು ಮುಖ್ಯ ವಿಜ್ಞಾನಿ ಡಾ. ಪ್ರತಿಭಾ ರೋಹಿತ್ ಈ ಸಂದರ್ಭ ಹೇಳಿದರು.
ಪಂಚಾಯಿತಿ ಉಪಾಧ್ಯಕ್ಷ ಅಶೋಕ್ ಬಂಗೇರ, ಸದಸ್ಯರಾದ ವಿನೋದ್ ಕೊಳು ವೈಲು, ಧನರಾಜ್ ಕೋಟ್ಯಾನ್, ಪಿಡಿಒ ಮುತ್ತಪ್ಪ ಡಾ. ದಿನೇಶ್ ಬಾಬು, ಡಾ. ಸುಜಿತಾ ಥಾಮಸ್, ಡಾ. ರಾಜೇಶ್, ಡಾ. ಪುರುಷೋತ್ತಮ, ಡಾ. ದಿವ್ಯಾ, ಫಲಾನುಭವಿ ಭುಜಂಗ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
23/05/2022 04:20 pm