ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಪಂಚಶಕ್ತಿ ಬ್ಯಾಂಕ್ ವತಿಯಿಂದ ಹಿಂದುಳಿದ ವರ್ಗಗಳಿಗೆ ಧನ ಸಹಾಯ - ರಂಜಿತ್‌ ಕುಮಾರ್

ಮೂಡುಬಿದಿರೆ: ಪಂಚಶಕ್ತಿ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಇದರ ವತಿಯಿಂದ ಆರ್ಥಿಕವಾಗಿ ಹಿಂದುಳಿದವರಿಗೆ ಧನ ಸಹಾಯ ನೀಡಲಾಗಿದೆ ಎಂದು ಪಂಚಶಕ್ತಿ ಅಧ್ಯಕ್ಷ ರಂಜಿತ್ ಕುಮಾರ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಮೂಡುಬಿದಿರೆ ಕಾರ್ಯನಿರತ ಪ್ರಸ್‌ಕ್ಲಬ್‌ನಲ್ಲಿ ಮಾತನಾಡಿದ ಅವರು ಅಸಕ್ತರಿಗೆ, ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಹಾಗೂ ಕೊರೊನಾ ಸಂಕಷ್ಟದ ಅವಧಿಯಲ್ಲಿ ಬಡ ಕುಟುಂಬಗಳಿಗೆ ಸಹಾಯ ಹಸ್ತವನ್ನು ನೀಡಲಾಗಿದೆ ಎಂದರು.

ಇವರ ಈ ಸಾಧನೆಗೆ 2019-20ನೇ ಸಾಲಿನ ದ.ಕ ಜಿಲ್ಲಾ ಉತ್ತಮ ಸೌಹಾರ್ದ ಸಹಕಾರಿ ಪ್ರಶಸ್ತಿ ಲಭಿಸಿದ್ದು ಸಂತೋಷದ ವಿಷಯ ಎಂದರು.

ಉಪಾಧ್ಯಕ್ಷೆ ಉಷಾ, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜಶೇಖರ್ ಮದ್ಯಸ್ಥ, ನಿರ್ದೇಶಕರಾದ ಶರತ್ ಜೆ.ಶೆಟ್ಟಿ, ಸುರೇಶ್ ಪೂಜಾರಿ ಎಂ, ರತ್ನಾಕರ ಪೂಜಾರಿ, ರಮೇಶ್ ಶೆಟ್ಟಿ, ನಾಗೇಶ್ ನಾಯಕ್, ರಾಜೇಂದ್ರ ಬಿ., ಈ ಸಂದರ್ಭದಲ್ಲಿ ಇದ್ದರು.

Edited By : PublicNext Desk
Kshetra Samachara

Kshetra Samachara

13/04/2022 04:49 pm

Cinque Terre

1.21 K

Cinque Terre

0

ಸಂಬಂಧಿತ ಸುದ್ದಿ