ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಿನ್ನಿಗೋಳಿ:"ಆಟಿಯ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ಯುವ ಜನಾಂಗದ ಜೀವನಶೈಲಿ ಬದಲಾಗಬೇಕು_

ಮುಲ್ಕಿ:ಕಿನ್ನಿಗೋಳಿ ಸಮೀಪದ ಮೆನ್ನಬೆಟ್ಟು ಶ್ರೀ ಭ್ರಾಮರೀ ಮಹಿಳಾ ಸಮಾಜ (ರಿ)ದ 15 ನೇ ವಾರ್ಷಿಕೋತ್ಸವ ಹಾಗೂ ಆಟಿಡ್ ಪಡ್ಸಲೆದ ಪೊರ್ಲು ಕಾರ್ಯಕ್ರಮ ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಕಿನ್ನಿಗೋಳಿ ರಾಜರತ್ನಪುರ ಬಾಲಗಣೆಶೋತ್ಸವ ಸಮಿತಿಯ ಹರಿಪ್ರಸಾದ್ ಆಚಾರ್ಯ ದೀಪ ಬೆಳಗಿಸಿ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಧಾರ್ಮಿಕ ಪರಿಷತ್ ಸದಸ್ಯ ಭುವನಾಭಿರಾಮ ಉಡುಪ ಮಾತನಾಡಿ ಹಳೆಯ ಕಾಲದ ಆಟಿಯ ದಿನಗಳನ್ನು ನೆನಪಿಸಿಕೊಳ್ಳುವ ಮೂಲಕ ಯುವ ಜನಾಂಗದ ಜೀವನಶೈಲಿ ಬದಲಾಗಬೇಕು ಎಂದರು. ಶಿಮಂತೂರು ಶಾರದ ಮೋಡೆಲ್ ಸೆಕೆಂಡರಿ ಸ್ಕೂಲ್ ನ ಶಿಕ್ಷಕಿ ಕಾಂತಿ ಕಿರಣ್ ಶೆಟ್ಟಿ, ಉಪನ್ಯಾಸ ನೀಡಿದರು. ಮೆನ್ನಬೆಟ್ಟು ಭ್ರಾಮರೀ ಮಹಿಳಾ ಸಮಾಜ (ರಿ) ದ ಗೌರವಾಧ್ಯಕ್ಷೆ ಸಾವಿತ್ರಿ ಶೆಟ್ಟಿ ಕಿನ್ನಿಗೋಳಿ,ಕವಿತಾ ಶಂಭು,ಅಧ್ಯಕ್ಷೆ ಅನುಷ ಕರ್ಕೇರಾ, ರೇವತಿ ಪುರುಷೋತ್ತಮ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸ್ಥಳೀಯ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಸಂಮಾನ ನಡೆಯಿತು. ಆಟಿ ತಿಂಗಳ ಖಾದ್ಯ ತಿಂಡಿ ತಿನಿಸುಗಳನ್ನು ಉಣಬಡಿಸಲಾಯಿತು.

Edited By : PublicNext Desk
Kshetra Samachara

Kshetra Samachara

31/07/2022 07:09 pm

Cinque Terre

2.96 K

Cinque Terre

0

ಸಂಬಂಧಿತ ಸುದ್ದಿ