ಮುಲ್ಕಿ: ಪಕ್ಷಿಕೆರೆ ಸಮಿಪದ ಪಂಜ ಮಡಿವಾಳಬೆಟ್ಟು ನಿವಾಸಿ ಶಶಿಕಲಾ ರವರು ತನ್ನ ಪತಿ, ಹಾಗೂ ದುಡಿಯುವ ಮಗನನ್ನು ಇತ್ತೀಚೆಗೆ ಕಳೆದುಕೊಂಡು, ಸ್ವಂತ ಸೂರಿಲ್ಲದೆ ಪುತ್ರಿಯ ಮನೆಯಲ್ಲಿ ವಾಸವಿದ್ದು . ಆಸರೆಯಾಗಿದ್ದ ಪುತ್ರಿಯ ಪತಿ ಕಳೆದ ದಿನಗಳ ಹಿಂದೆ ಅಕಾಲಿಕವಾಗಿ ಮರಣ ಹೊಂದಿದ್ದು ಇಡೀ ಕುಟುಂಬ ತೊಂದರೆಗೊಳಗಾಗಿದ್ದರು.
ಕುಟುಂಬದ ಕಷ್ಟವನ್ನು ಅರಿತು ಕೂಡಲೇ ಕಾರ್ಯಪ್ರವೃತ್ತರಾದ ಸೇವಾಭಾರತ್ ಪಂಜ ಕೊಯಿಕುಡೆ ಮತ್ತು ಪಾಂಡುರಂಗ ವಿಠ್ಠಲ ವಾಟ್ಸಾಪ್ ಗ್ರೂಪಿನ ಸದದ್ಯರು , ಸಹೃದಯಿ ಊರ ಪರವೂರಿನ ದಾನಿಗಳ ಸಹಕಾರದಿಂದ ಸುಮಾರು ಐವತ್ತು ಸಾವಿರ ರೂಪಾಯಿಯನ್ನು ಸಂತ್ರಸ್ತ ಕುಟುಂಬಕ್ಕೆ ಜಿಲ್ಲಾ ಪಂಚಾಯತ್ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಕಸ್ತೂರಿ ಪಂಜ ನೇತೃತ್ವದಲ್ಲಿ ಹಸ್ತಾಂತರಿಸಿದರು.
ಈ ಸಂದರ್ಭ ಉಮೇಶ್ ಪಂಜ, ರಾಜೇಶ್ ಶೆಟ್ಟಿ, ಯಾದವ ಅಂಚನ್, ಸುನಿಲ್ ಶೆಟ್ಟಿ, ರೋಹನ್ ಪಂಜ , ಶೇಖರ್ ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
13/06/2022 09:48 am