ಸುರತ್ಕಲ್: ಸುರತ್ಕಲ್ ಸಮೀಪದ ಕೃಷ್ಣಾಪುರ ಪರಿಸರದಲ್ಲಿ ಮಾರ್ಚ್ 22 ರ ಎನ್ಐಟಿಕೆ ಟೋಲ್ ಚಲೋ ಪಾದಯಾತ್ರೆಯ ವ್ಯಾಪಕ ಪ್ರಚಾರ ನಡೆಯಿತು. ಸ್ಥಳೀಯ ಸಂಘ ಸಂಸ್ಥೆಗಳ ಪ್ರಮುಖರು ಉತ್ಸಾಹದಿಂದ ಭಾಗಿಯಾದರು. ಸುರತ್ಕಲ್ ಟೋಲ್ ಗೇಟ್ ತೆರವು ಹೋರಾಟಕ್ಕೆ ಶಕ್ತಿತುಂಬಿದರು.
ಕೃಷ್ಣಾಪುರ ಪರಿಸರದ ಪ್ರತಿಷ್ಟಿತ ಕ್ಲಬ್ ಗಳಾದ ಪ್ರಾರಡೈಸ್ ಸ್ಪೋರ್ಟ್ಸ್ ಕ್ಲಬ್, ಅಲ್ ಹುನೈನ್, ಕೆಎಫ್ ಸಿ, ಯಂಗ್ ಫ್ರೆಂಡ್ಸ್, ನ್ಯೂ ಫ್ರೆಂಡ್ಸ್ ಅಲ್ ಅಮೀನ್, ಸ್ಪೋರ್ಟಿಂಗ್ ಸಹಿತ ಹಲವು ಕ್ಲಬ್ ಗಳ ಪದಾಧಿಕಾರಿಗಳು ಕೈ ಜೋಡಿಸಿದರು. ಪಾದಯಾತ್ರೆಯಲ್ಲಿ ಸಾಮೂಹಿಕವಾಗಿ ಭಾಗವಹಿಸುವ ಘೋಷಣೆ ಮಾಡಿದರು. ಈ ಸಂದರ್ಭ ಸುರತ್ಕಲ್ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಪದಾಧಿಕಾರಿಗಳು ಉಪಸ್ಥಿತರಿದ್ದರು.
Kshetra Samachara
18/03/2022 10:18 pm