ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಚೇಳೈರು: ಕೆಡಿಪಿ ಸಭೆಗೆ ಅಧಿಕಾರಿಗಳ ಗೈರು; ಗ್ರಾಮಸ್ಥರ ಆಕ್ರೋಶ

ಮುಲ್ಕಿ:ಗ್ರಾಮ ಪಂಚಾಯತ್ ಗೆ ಕಾಲ ಕಾಲಕ್ಕೆ ಮನೆತೆರಿಗೆ ,ನೀರಿನ ಬಿಲ್ ಕಟ್ಟಬೇಕಾದುದು ಸಾರ್ವಜನಿಕ ಅಧ್ಯ ಕರ್ತವ್ಯ ಚೇಳೈರು ಗ್ರಾಮ ಪಂಚಾಯತ್ ನ್ನು ಎಲ್ಲರ ಸಹಕಾರದಲ್ಲಿ ಇಡೀ ಜಿಲ್ಲೆಗೆ ಅಭಿವೃದ್ದಿಯಲ್ಲಿ ಮಾದರಿ ಗ್ರಾಮ ಪಂಚಾಯತ್ ಮಾಡಲು ಯೋಜನೆ ಹಾಕಿದ್ದು ಗ್ರಾಮ ಪಂಚಾಯತ್ ಜೊತೆ ಗ್ರಾಮಸ್ಥರ ಸಹಕಾರ ಇದ್ದರೆ ಮಾತ್ರ ಸಾಧ್ಯ ಎಂದು ಚೇಳೈರು ಗ್ರಾಮ ಪಂಚಾಯತ್ ಅಧ್ಯಕ್ಷೆ ಯಶೋದ ಹೇಳಿದರು.

ಚೇಳೈರು ಗ್ರಾಮ ಪಂಚಾಯತ್ ಸಮುದಾಯಭವನದಲ್ಲಿ ನಡೆದ ಚೇಳೈರು ಗ್ರಾಪಂ ನ ದ್ವೀತಿಯ ಹಂತದ ಕೆ.ಡಿ.ಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಚೇಳೈರು ಗ್ರಾಮ ಪಂಚಾಯತ್ ನಲ್ಲಿ ಹೆಚ್ಚಿನ ಗ್ರಾಮಸ್ಥರು ನೀರಿನ ಬಿಲ್ ಕಟ್ಟದೆ ಬಾಕಿ ಇರಿಸಿದ್ದು ಅವರಿಗೆ ಈಗಾಗಲೇ ನೋಟಿಸು ನೀಡಿದೆ ನೋಟಿಸು ನೀಡಿದ ಬಳಿಕವು ಕಟ್ಟದಿದ್ದರೆ ಅಂತವರ ನೀರಿನ ಸಂಪರ್ಕ ಕಡಿತಗೊಳಿಸಲಾಗುವುದು ಹಾಗೂ ಕೇಂದ್ರ ಸರಕಾರದ 15 ನೇ ಹಣಕಾಸಿನ ಹಣ ಬಿಡುಗಡೆಯಾಗಿದ್ದು ಕ್ರಿಯಾಯೋಜನೆ ಅನುಮೋದನೆ ಅಗಿದ್ದು ಮಾರ್ಚ್ ತಿಂಗಳೊಳಗೆ ಕಾಮಗಾರಿಗಳನ್ನು ಮುಗಿಸಲಾಗುವುದು ಎಂದರು.

ಅವರು ಮಾತನಾಡಿ ಪಂಚಾಯತ್ ವ್ಯಾಪ್ತಿಯ ಸಾರ್ವಜನಿಕ ಸ್ಥಳಗಳಲ್ಲಿ ತ್ಯಾಜ್ಯ ಬಿಸಾಡುವುದು ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ,ಕೇಂದ್ರ ಸರಕಾರದ ಪ್ರತಿಯೊಂದು ಮನೆಗೂ ನಳ್ಳಿ ನೀರಿನ ಸಂಪರ್ಕ ನೀಡುವ ಮಹತ್ವದ ಯೋಜನೆ ಮನೆ ಮನೆ ಗಂಗೆ ಜಲಜೀವನ್ ಮಿಷನ್ ಯೋಜನೆ ಮೂಲಕ 2024 ರ ವೇಳೆಗೆ ಗ್ರಾಮದ ಪ್ರತಿಯೊಂದು ಮನೆಗೆ ಮತ್ತು ಪ್ರತಿಯೊಬ್ಬ ನಾಗರೀಕನಿಗೆ ನೀರಿನ ವ್ಯವಸ್ಥೆ ಅಗಬೇಕು ಎಂಬ ಉದ್ದೇಶದಿಂದ ರಾಜ್ಯ ಸರಕಾರ ಮತ್ತು ಕೇಂದ್ರ ಸರಕಾರದಿಂದ 1 ಕೋಟಿ 4 ಲಕ್ಷ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಾರಂಭವಾಗಿದೆ ಎಂದರು.

ರಾಜ್ಯ ಸರಕಾರ ಗ್ರಾಮ ಪಂಚಾಯತ್ ನಲ್ಲಿ ಕೆ.ಡಿ.ಪಿ ಸಭೆಯನ್ನು ನಡೆಸಬೇಕು ಇದಕ್ಕೆ ಸಂಬಂಧಿಸಿದ ಅಧಿಕಾರಿಗಳು ಕಡ್ಡಾಯವಾಗಿ ಸಭೆಗೆ ಭಾಗವಹಿಸಬೇಕೆಂದು ಸರಕಾರದ ಅದೇಶ ಇದ್ದರೂ ಸಭೆಗೆ ಅಗತ್ಯವಾಗಿ ಬರಬೇಕಾದ ಜಿಲ್ಲಾ ಪಂಚಾಯತ್ ಇಂಜಿನಿಯರ್ ಗೈರಾಗಿದ್ದು ಸಭೆಯಲ್ಲಿ ಸದಸ್ಯರೊಬ್ಬರು ಅಕ್ರೋಶ ವ್ಯಕ್ತಪಡಿಸಿ ಸಭೆಯಿಂದ ಹೊರನಡೆದರು.

ಗ್ರಾಮ ಕರಣಿಕ ವಿಜೇತ್

ಗ್ರಾ ಪಂ ಉಪಾಧ್ಯಕ್ಷ ಬಾಲಕೃಷ್ಣ ಶೆಟ್ಟಿ, ಸದಸ್ಯರುಗಳಾದ ರೇಖಾ,ಸುಕುಮಾರಿ,ಸುಧಾಕರ ಶೆಟ್ಟಿ, ಲತಾ,,ಸುಮನಾ ಭಟ್,, ಚರಣ್ ಕುಮಾರ್,,ಕಾಟಿಪಳ್ಳ ಅರೋಗ್ಯ ಕೇಂದ್ರದ ಸಹಾಯಕಿ ಮಂಜುಳಾ, ಚೇಳೈರು ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಚಂದ್ರನಾಥ್, ,ಮೆಸ್ಕಾಂ ಅಧಿಕಾರಿಗಳು, ಶಿಕ್ಷಣ ಇಲಾಖೆ,ಅಂಗನವಾಡಿ ,ಅರೋಗ್ಯ, ಅಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

12/03/2022 02:12 pm

Cinque Terre

662

Cinque Terre

0

ಸಂಬಂಧಿತ ಸುದ್ದಿ