ಮುಲ್ಕಿ: ಕಿನ್ನಿಗೋಳಿ ಬಳ್ಕುಂಜೆ ಪ್ರಧಾನ ರಸ್ತೆಯ ಕುಕ್ಕಿಕಟ್ಟೆ ಬಳಿ ಗುರುವಾರ ಸಂಜೆ ಆರು ಗಂಟೆಗೆ ಕಾಡುಕೋಣ ಪ್ರತ್ಯಕ್ಷವಾಗಿದೆ.
ರಸ್ತೆಯಲ್ಲಿ ಕಾಡುಕೋಣ ರಾಜಾರೋಷವಾಗಿ ನಿಂತಿದ್ದು ಬಳಿಕ ಸಮೀಪದ ಗುಡ್ಡೆಯಲ್ಲಿ ಮರೆಯಾಗಿದೆ.
ಈ ಸಂದರ್ಭ ಸ್ಥಳೀಯರು ಪರಿಶೀಲನೆಗೆ ಹೋದಾಗ ಅಲ್ಲಿ ಮತ್ತೆ ಕಾಡುಕೋಣ ಪ್ರತ್ಯಕ್ಷವಾಗಿ ಆತಂಕದ ವಾತಾವರಣ ಸೃಷ್ಟಿಯಾಗಿದೆ.
ಕಳೆದ ಕೆಲವು ತಿಂಗಳ ಹಿಂದೆ ಈ ಪರಿಸರದಲ್ಲಿ ಚಿರತೆ ಕಾಟ ಕಂಡುಬಂದಿದ್ದು ಇದೀಗ ಕಾಡುಕೋಣದ ಹಾವಳಿಯಿಂದ ಸ್ಥಳೀಯ ನಾಗರಿಕರು ಮತ್ತೆ ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಒತ್ತಾಯಿಸಿದ್ದಾರೆ.
Kshetra Samachara
10/03/2022 09:47 pm