ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ರಸ್ತೆಬದಿ ಇರಬೇಕಾದ ಸೂಚನಾ ಫಲಕ ಮರದ ಕೊಂಬೆಯಲ್ಲಿ!!

ಮುಲ್ಕಿ: ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿ ಬೆಥನಿ ಪದವಿಪೂರ್ವ ಕಾಲೇಜು ಬಳಿ ಹೆದ್ದಾರಿಯಲ್ಲಿ ಹಾಕಿದ್ದ ಮಾರ್ಗಸೂಚಿ ನಾಮಫಲಕವನ್ನು ಯಾರೋ ದುಷ್ಕರ್ಮಿಗಳು ಮರದ ಕೊಂಬೆಯಲ್ಲಿ ನೇತುಹಾಕಿದ್ದಾರೆ.

ಮುಲ್ಕಿ ಕಿನ್ನಿಗೋಳಿ ರಾಜ್ಯ ಹೆದ್ದಾರಿಯ ಮುಲ್ಕಿ ಬಸ್ಸು ನಿಲ್ದಾಣದ ಬಳಿಯಿಂದ ಕಿಲ್ಪಾಡಿ ಪಂಚಾಯತ್ ವರೆಗೆ ಪ್ರತಿನಿತ್ಯ ವಾಹನ ದಟ್ಟಣೆ ವಿಪರೀತವಾಗಿದ್ದು ನಿಧಾನವಾಗಿ ಚಲಿಸಲು ಕೆಲಕಡೆ ಮಾರ್ಗಸೂಚಿ ನಾಮಫಲಕವನ್ನು ಅಳವಡಿಸಲಾಗಿತ್ತು.

ಕಿಲ್ಪಾಡಿ ಗ್ರಾಮ ಪಂಚಾಯತ್ ಬಳಿಯಲ್ಲಿ ಬೆಥನಿ ಸಂಸ್ಥೆ ಯ ಶಾಲಾ ಕಾಲೇಜು ಇದ್ದು ಶಾಲೆ ಬಿಡುವ ವೇಳೆಯಲ್ಲಿ ವಾಹನಗಳು ನಿಧಾನಗತಿಯಲ್ಲಿ ಸಾಗಲು ಅಳವಡಿಸಿದ್ದ ಮಾರ್ಗಸೂಚಿ ಫಲಕವನ್ನು ರಸ್ತೆಬದಿಯ ಬೃಹತ್ ಗಣಪತಿ ಕಾಯಿ ಮರದ ಕೊಂಬೆಯೊಳಗೆ ಹಾಕಿ ವಿಕೃತಿ ಮೆರೆದಿದ್ದಾರೆ.

ಕೂಡಲೇ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಈ ಬಗ್ಗೆ ಗಮನ ಹರಿಸಬೇಕಾಗಿದೆ ಹಾಗೂ ಟ್ರಾಫಿಕ್ ಪೊಲೀಸ್ ಠಾಣೆಯ ಅಧಿಕಾರಿಗಳು ಈ ಪರಿಸರದಲ್ಲಿ ಶಾಲಾ-ಕಾಲೇಜು ಬಿಡುವ ವೇಳೆ ಸೂಕ್ತ ಸಿಬ್ಬಂದಿಯನ್ನು ನೇಮಿಸಿ ಟ್ರಾಫಿಕ್ ನಿಯಂತ್ರಿಸುವುದಲ್ಲದೆ ಪರವಾನಿಗೆ ಇಲ್ಲದೆ ಮಕ್ಕಳು ದ್ವಿಚಕ್ರ ವಾಹನದಲ್ಲಿ ಎರ್ರಾಬಿರ್ರಿಯಾಗಿ ಚಲಿಸುತ್ತಿದ್ದು ಸೂಕ್ತ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

03/10/2021 12:48 pm

Cinque Terre

2.19 K

Cinque Terre

0

ಸಂಬಂಧಿತ ಸುದ್ದಿ