ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಪರಂಗಿಪೇಟೆ‌ ಸ್ಟೂಡಿಯೋ ಮಾಲಕನ‌ ಕೊಲೆಯತ್ನ ಪ್ರಕರಣ ತಲೆ ಮರೆಸಿಕೊಂಡಿದ್ದ ಆರೋಪಿ ಬಂಧನ

ಬಂಟ್ವಾಳ: ಪರಂಗಿಪೇಟೆಯ ತೃಷಾ ಸ್ಟೂಡಿಯೊದ

ಮಾಲಕನ ಹತ್ಯೆಗೆ ಯತ್ನಸಿ ಪರಾರಿಯಾದ್ದ ಆರೋಪಿ ಯೋರ್ವನನ್ನು ಬಂಟ್ವಾಳ‌ ಪೊಲೀಸರು ಗುರುವಾರ ರಾತ್ರಿ ಬಂಧಿಸಿದ್ದಾರೆ.

ಬಂಧಿತನ್ನು ಸವಾದ್ (20) ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಕರಣ ಸಂಬಂಧ ಅಮ್ಮೆಂಮಾರು ನಿವಾಸಿಗಳಾದ ಸೈಫುದ್ದೀನ್, ಅಬ್ದುಲ್‌ ರೆಹಮಾನ್, ಮುಹಮ್ಮದ್ ಹರ್ಷದ್ ಎಂಬವರನ್ನು ಪೊಲೀಸರು ಬುಧವಾರವೇ ಬಂಧಿಸಿದ್ದರು. ಆದರೆ, ಘಟನೆಗೆ ಪ್ರಮುಖ ಸೂತ್ರದಾರ‌ ಎನ್ನಲಾದ ಸವಾದ್ ತಲೆಮರೆಸಿಕೊಂಡಿದ್ದ.

ಘಟನೆಯ ಸಂಬಂಧ ಪ್ರಕರಣ ದಾಖಲಿಸಿಕೊಂಡ ಬಂಟ್ವಾಳ‌ ಪೊಲೀಸರು ಗುರುವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಕಳೆದ ಬುಧವಾರ ಪುದು ಗ್ರಾಮದ ಕೊಟ್ಟಿಂಜ ನಿವಾಸಿ ದಿನೇಶ ಶೆಟ್ಟಿ ಎಂಬವರು ಪರಂಗಿಪೇಟೆ ತನ್ನ ಸ್ಟೂಡಿಯೋದಲ್ಲಿದ್ದ ವೇಳೆ ನಾಲ್ವರ ತಂಡ ಏಕಾಏಕಿ ಸ್ಟೂಡಿಯೋಗೆ‌ ನುಗ್ಗಿ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಪರಾರಿಯಾಗಿತ್ತು

Edited By :
Kshetra Samachara

Kshetra Samachara

30/10/2020 09:46 am

Cinque Terre

5.21 K

Cinque Terre

1

ಸಂಬಂಧಿತ ಸುದ್ದಿ