ಮಂಗಳೂರು : ನಗರದ ಹೊರವಲಯದ ಕೋಡಿಕಲ್ ಬಳಿ ಮಹಾತ್ಮಾಗಾಂಧಿ ಮೂಲಸೌಕರ್ಯ ಯೋಜನೆಯಡಿ ಒಂದು ಕೋಟಿ ರೂ.ವೆಚ್ಚದಲ್ಲಿ ಕೋಡಿಕಲ್ ಮುಖ್ಯರಸ್ತೆಯ ಉಳಿದ ಭಾಗದ ಕಾಂಕ್ರೀಟ್ ಹಾಕುವ ಕಾಮಗಾರಿಗೆ ಶಾಸಕ ಡಾ.ಭರತ್ ಶೆಟ್ಟಿ ವೈ ಗುದ್ದಲಿ ಪೂಜೆ ನೆರವೇರಿಸಿದರು.
ಮೇ ತಿಂಗಳ ಒಳಗಾಗಿ ಈ ಕಾಮಗಾರಿ ಪೂರ್ಣಗೊಳಿಸಲಾಗುವುದು. 16 ಮತ್ತು 17 ಬಂಗ್ರಕೂಳೂರು ವಾರ್ಡ್ ಸಂಪರ್ಕಿಸುವ ಎಸ್ ಎನ್ ಡಿ ಪಿ ,ಆಲದ ಗುಡ್ಡೆ ವರೆಗೆ ಕಾಂಕ್ರಿಟ್ ಜತೆಗೆ ವಿಸ್ತರಣೆ ಮಾಡಲಾಗುತ್ತದೆ ಎಂದರು. ಇದರ ಜತೆಗೆ ಮುಖ್ಯಮಂತ್ರಿಗಳ ವಿಶೇಷ ಅನುದಾನ 52 ಕೋಟಿ ರೂ.ಮಂಗಳೂರು ಉತ್ತರ ಕ್ಷೇತ್ರಕ್ಕೆ ಬರಲಿದ್ದು ಹಲವಾರು ಅಭಿವೃದ್ಧಿ ಕಾರ್ಯಗಳಿಗೆ ಯೋಜನೆ ರೂಪಿಸಿ ಮಳೆಗಾಲದ ಮುನ್ನ ಮುಗಿಸಲು ಕ್ರಮ ಕೈಗೊಳ್ಳಲಾಗುದು ಎಂದು ತಿಳಿಸಿದ್ದಾರೆ.
ಈ ವೇಳೆ ಮನಪಾ ಸದಸ್ಯರಾದ ಮನೋಜ್ ಕೋಡಿಕಲ್,ಕಿರಣ್ ಕುಮಾರ್ ಕೋಡಿಕಲ್ ,ಗೋಪಾಲ್ ಕೋಟ್ಯಾನ್,ಎಸ್ ಎನ್ ಡಿ ಪಿ ಅಧ್ಯಕ್ಷ ಪುರುಷೋತ್ತಮ್ ಪೂಜಾರಿ ಉಪಸ್ಥಿತರಿದ್ದರು.
Kshetra Samachara
26/03/2022 01:41 pm