ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಜೆಡಿಎಸ್ ಸಾಮಾನ್ಯ ಸಭೆಯು ಜಿಲ್ಲಾ ಅಡಾಕ್ ಸಮಿತಿ ಅಧ್ಯಕ್ಷರಾದ ಜಾಕೆ ಮಾಧವ ಗೌಡರ ಅಧ್ಯಕ್ಷತೆಯಲ್ಲಿ ನಡೆಯಿತು.ಸಭೆಯನ್ನುದ್ದೇಶಿಸಿ ಮಾತನಾಡಿದ ಅಡಾಕ್ ಸಮಿತಿ ಅಧ್ಯಕ್ಷರಾದ ಮಾಧವ ಗೌಡರು ಪಕ್ಷ ಸಂಘಟನೆ ಮಾಡಿ ಮುಂದಿನ ಚುನಾವಣೆಗಳಲ್ಲಿ ಜೆಡಿಎಸ್ ಪಕ್ಷವನ್ನು ಅಧಿಕಾರಕ್ಕೆ ತರಲು ಕಾರ್ಯಕರ್ತರು ಶ್ರಮವಹಿಸಬೇಕು ಎಂದು ಪಕ್ಷದ ವರಿಷ್ಠರು, ಮಾಜಿ ಮುಖ್ಯಮಂತ್ರಿಯವರಾದ ಹೆಚ್.ಡಿ. ಕುಮಾರಸ್ವಾಮಿಯವರು ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾದ ಹೆಚ್.ಕೆ. ಕುಮಾರಸ್ವಾಮಿ ನೀಡಿದ ನಿರ್ದೇಶನಗಳನ್ನು ಸಭೆಗೆ ವಿವರಿಸಿದರು.
ಮುಂದಿನ ಕೆಲವು ದಿನಗಳಲ್ಲಿ ಪ್ರತಿಯೊಂದು ತಾಲೂಕು ಕೇಂದ್ರಗಳಿಗೆ ಭೇಟಿಯನ್ನು ಕೊಟ್ಟು, ಸಭೆಯನ್ನು ನಡೆಸಿ ತಾಲೂಕು ಸಮಿತಿ, ಬ್ಲಾಕ್ ಸಮಿತಿ ಹಾಗೂ ವಿಧಾನಸಭಾ ಕ್ಷೇತ್ರದ ನೂತನ ಸಮಿತಿ ರಚನೆ ಬಗ್ಗೆ ಮಾಹಿತಿಯನ್ನು ಸಭೆಗೆ ನೀಡಿದರು.
ಸಭೆಯನ್ನುದ್ಧೇಶಿಸಿ ಇಕ್ಬಾಲ್ ಅಹ್ಮದ್ ಮುಲ್ಕಿ, ಸುಮತಿ ಹೆಗ್ಡೆ, ಹಿರಿಯರಾದ ಎಂ.ಬಿ. ಸದಾಶಿವ ಹಾಗೂ ಅಕ್ಷಿತ್ ಸುವರ್ಣರವರು ಪಕ್ಷ ಸಂಘಟನೆ ಮಾಡುವ ಬಗ್ಗೆ ಮಾತನಾಡಿದರು.
ಪಕ್ಷದ ಸಾಮಾನ್ಯ ಸಭೆಗೆ ಆಗಮಿಸಿದ ನಾಯಕರಿಂದ ಈ ಸಭೆಯಲ್ಲಿ ಪಕ್ಷ ಸಂಘಟನೆ ಮಾಡುವ ನಿಟ್ಟಿನಲ್ಲಿ ಸಲಹೆ ಸೂಚನೆ ನೀಡಲು ಮುಖಂಡರಾದ ಅಝೀಜ್ ಮಲಾರ್, ರಾಮ್ ಗಣೇಶ್, ನಝೀರ್ ಉಳ್ಳಾಲ್, ಸುದರ್ಶನ್ ಶೆಟ್ಟಿ, ದಿವಾಕರ್ ಶೆಟ್ಟಿ ತೋಡಾರ್, ದಿನಕರ್ ಉಳ್ಳಾಲ್, ಯು.ಹೆಚ್. ಫಾರೂಕ್, ಅಹ್ಮದ್ ಬಾವ ಕಣ್ಣೂರು, ವಿಲಿಯಂ ಗೋಮ್ಸ್, ಮೋಹನ್ ಬಂಟ್ವಾಳ್, ಸುಂದರ ಗೌಡ ಬೆಳ್ತಂಗಡಿ, ಜೀವನ್ ಶೆಟ್ಟಿ, ಮೋಹನದಾಸ್ ಶೆಟ್ಟಿ, ಚೂಡಾಮಣಿ, ಹಾರೂನ್ ರಶೀದ್ ಮತ್ತಿತರ ನಾಯಕರು ಸಲಹೆಗಳನ್ನು ಕೊಟ್ಟರು.
ಸಭೆಯಲ್ಲಿ ಪಕ್ಷದ ಹಿರಿಯ ನಾಯಕರಾದ ಹೈದರ್ ಪರ್ತಿಪಾಡಿ ಹಾಗೂ ಅಬೂಬಕ್ಕರ್ ನಾಟೆಕಲ್, ರಿಯಾಝ್ ಹೆಚ್. ಕಾರ್ನಾಡ್, ಅಬೂಬಕ್ಕರ್ ಅಂಮುಂಜೆ, ಖಲೀಲ್ ಉಳ್ಳಾಲ್, ಗೋಪಾಲಕೃಷ್ಣ ಅತ್ತಾವರ, ಕನಕದಾಸ ಕೂಳೂರು, ಸುಕುಮಾರ್ ಗೌಡ ಕೊಲ್ತುಗುಳಿ, ಇಬ್ರಾಹಿಂ ಗೂಳಿಕಟ್ಟೆ, ರಾಕೇಶ್ ಸುಳ್ಯ, ಲತೀಫ್ ವಲಚ್ಚಿಲ್, ಪೃಥ್ವಿರಾಜ್ ಶೆಟ್ಟಿ, ನೂರುಲ್ಲಾ ಶೇಕ್, ಅಲ್ತಾಫ್ ತುಂಬೆ, ಅಂಜಲಿ, ಪ್ರಿಯಾ, ಅಝೀಯ್ ಸುರತ್ಕಲ್, ವಂದನಾ, ಮಹಾವೀರ್ ಜೈನ್, ಮತ್ತಿತರರು ಉಪಸ್ಥಿತರಿದ್ದರು.
Kshetra Samachara
02/10/2021 07:55 am