ಮಂಗಳೂರು: ತುರ್ತು ಪರಿಸ್ಥಿತಿ ಸಂದರ್ಭ ಜೈಲುವಾಸಿಯಾಗಿದ್ದ, ಮಾಜಿ ಮಂಗಳೂರು ನಗರಸಭಾ ಸದಸ್ಯೆ ಶಾರದಾ ಆಚಾರ್(89) ಇಂದು ಸ್ವಗೃಹದಲ್ಲಿ ಬೆಳಗ್ಗೆ ನಿಧನರಾದರು.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಮಂಗಳೂರು ಮಹಾನಗರ ಸಹ ಸಂಘಚಾಲಕರಾಗಿರುವ ಸುನಿಲ್ ಆಚಾರ್ಯ ಅವರ ತಾಯಿಯಾಗಿರುವ ಶಾರದಾ ಆಚಾರ್ , ಜನ ಸಂಘದ ಕರ್ನಾಟಕ ಪ್ರಾಂತ್ಯ ದ ಉಪಾಧ್ಯಕ್ಷರಾಗಿದ್ದರು.
3 ಅವಧಿಯ ವರೆಗೆ ಮಂಗಳೂರು ನಗರಸಭೆಯ ಸದಸ್ಯರಾಗಿದ್ದ ಅವರು, 9 ವರ್ಷಗಳ ಕಾಲ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.
ತುರ್ತು ಪರಿಸ್ಥಿತಿ ಸಂದರ್ಭ ಸೆರೆವಾಸ ಅನುಭವಿಸಿದ್ದ ಅವರು, ಆ ಬಳಿಕ ನಡೆದ ವಿಧಾನಸಭೆ ಚುನಾವಣೆಯಲ್ಲಿ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. ಸ್ಕೌಟ್ ಚಟುವಟಿಕೆಗಳಲ್ಲೂ ಸಕ್ರಿಯರಾಗಿದ್ದು, ಜಿಲ್ಲಾ ಮಟ್ಟದಲ್ಲಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಸಿರಿ ತೋಟಗಾರಿಕೆ ಸಂಘದ ಖಜಾಂಚಿಯಾಗಿದ್ದ ಅವರು, ಇಬ್ಬರು ಪುತ್ರರು ಹಾಗೂ ಓರ್ವ ಪುತ್ರಿಯನ್ನು ಅಗಲಿದ್ದಾರೆ.
Kshetra Samachara
06/02/2021 08:53 pm