ಮಂಗಳೂರು: ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಎಸ್ ಎಫ್ ಸಿ ನಿಧಿಯಿಂದ ಮಂಜೂರಾದ ದೋಟ ರಸ್ತೆ, ತೊಡ್ಲ ಗುಡ್ಡೆ ರಸ್ತೆ ,ಪಳನೀರು ಅಂಗನವಾಡಿ ತಡೆಗೋಡೆ, ಶಾಂತಿನಗರ ಕುರುಬರ ಸಂಘ ರಸ್ತೆ, ಗಾಂಧಿನಗರ 4ನೇ ಅಡ್ಡರಸ್ತೆ ಶಂಕರ ನಗರ ರಸ್ತೆ,ಉರುಂದಾಡಿ ಧನುಷ್ ಮೈದಾನ ರಸ್ತೆ ಹಾಗೂ 14ನೇ ಹಣಕಾಸಿನ ನಿಧಿಯಿಂದ ಮಂಜೂರಾದ ಕೋರಂಬಾಡಿ ಶ್ರೀ ಕೋರ್ದಬ್ಬು ದೈವಸ್ಥಾನದ ಶೌಚಾಲಯ ಹಾಗೂ ಪಾಲಿಕೆಯ ಸಾಮಾನ್ಯ ನಿಧಿಯಿಂದ ಮಂಜೂರಾದ ಜ್ಯೋತಿನಗರ ಬಳಿ ರಸ್ತೆ ,ಪಳನೀರು ತಾಳಿ ತೋಟದ ಬಳಿ ರಸ್ತೆ, ಇಂತ್ರಕೋಡಿ ರಸ್ತೆ , ಬರಕಲ ಬಳಿ ತಡೆಗೋಡೆ ರಚನೆ ದಿವ್ಯ ನಗರ ರಸ್ತೆ ಒಟ್ಟು 78.13 ಲಕ್ಷದ ಕಾಮಗಾರಿಗಳನ್ನು ಶಾಸಕ ಡಾ.ವೈ. ಭರತ್ ಶೆಟ್ಟಿ ಉದ್ಘಾಟಿಸಿದರು.
ಮೇಯರ್ ದಿವಾಕರ್ ಪಾಂಡೇಶ್ವರ, ಪಾಲಿಕೆ ಸದಸ್ಯರಾದ ಶರತ್ ಕುಮಾರ್, ಕಿರಣ್ ಕುಮಾರ್, ಸ್ಥಳೀಯ ಕಾರ್ಪೊರೇಟರ್ ಸುಮಂಗಲ ರಾವ್, ಕಾವೂರು ಮಹಾಶಕ್ತಿ ಕೇಂದ್ರ 1ರ ಪ್ರಧಾನ ಕಾರ್ಯದರ್ಶಿ ಶಿತೇಶ್ ಕೊಂಡೆ, ಶೀಲಾ ಶೆಟ್ಟಿ,ಸಾಕ್ಷಾತ್ ಶೆಟ್ಟಿ , ಬಿಜೆಪಿ ಪ್ರಮುಖರು ಉಪಸ್ಥಿತರಿದ್ದರು.
Kshetra Samachara
24/01/2021 09:45 am