ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಂಟ್ವಾಳ: ಪ್ರಾಮಾಣಿಕತೆ, ನಿಷ್ಠೆಯಿಂದ ಕೆಲಸ ಮಾಡಿ; ಕಾಂಗ್ರೆಸ್‌ ಕಾರ್ಯಕರ್ತರಿಗೆ ಜನಾರ್ದನ ಪೂಜಾರಿ ಹಿತವಚನ

ಬಂಟ್ವಾಳ: ಕೇಂದ್ರ ಮತ್ತು ರಾಜ್ಯದಲ್ಲಿನ ಸರಕಾರಗಳ ವೈಫಲ್ಯಗಳ ವಿರುದ್ಧ ಅಭಿಯಾನ ನಡೆಸಲು ಮೈಸೂರು ವಿಭಾಗ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ಬಂಟ್ವಾಳದಲ್ಲಿ ನಡೆಸಿದ ಸಮ್ಮೇಳನ ಸ್ವಾಗತಾರ್ಹ ಎಂದು ಹಿರಿಯ ಕಾಂಗ್ರೆಸ್ ನಾಯಕ ಮತ್ತು ಮಾಜಿ ಕೇಂದ್ರ ಸಚಿವ ಬಿ. ಜನಾರ್ದನ ಪೂಜಾರಿ ಹೇಳಿದ್ದಾರೆ.

ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಅವರು ಬುಧವಾರ ಜನಾರ್ದನ ಪೂಜಾರಿ ಅವರ ನಿವಾಸಕ್ಕೆ ಭೇಟಿ ನೀಡಿ, ಮಾತುಕತೆ ನಡೆಸಿದರು. ಈ ಸಂದರ್ಭ ಪೂಜಾರಿ ಶುಭಾಶಯ ತಿಳಿಸಿದರು.

''ನಾಯಕರು, ಕಾರ್ಯಕರ್ತರು ಸೇರಲು ಮತ್ತು ಪಕ್ಷ ಸಂಘಟಿಸಲು ಒತ್ತು ನೀಡುವುದು ಅತ್ಯಗತ್ಯ. ಕಾರ್ಯಕರ್ತರಿಗೆ ಹೆಚ್ಚಿನ ಪ್ರಾಮುಖ್ಯತೆ, ಆದ್ಯತೆ ನೀಡಬೇಕು. ನಾವು ಸಮರ್ಪಣೆ ಭಾವ ಮತ್ತು ನಿಷ್ಠೆ, ಪ್ರಾಮಾಣಿಕತೆಯಿಂದ ಕೆಲಸ ಮಾಡಬೇಕು. ರಾಜ್ಯ ಮತ್ತು ಕೇಂದ್ರದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವಂತಾಗಲಿ'' ಎಂದು ಆಶಿಸಿದರು.

ಈ ಸಂದರ್ಭ ಮಾಜಿ ಕೆಪಿಸಿಸಿ ಕಾರ್ಯದರ್ಶಿ ತಾರಾನಾಥ್‌ ಶೆಟ್ಟಿ, ಪುರುಷೋತಮ್‌ ಚಿತ್ರಾಪುರ ಹಾಗೂ ಕರುಣಾಕರ್ ಶೆಟ್ಟಿ ಉಪಸ್ಥಿತರಿದ್ದರು.

Edited By : Nagaraj Tulugeri
Kshetra Samachara

Kshetra Samachara

07/01/2021 04:27 pm

Cinque Terre

6.85 K

Cinque Terre

0

ಸಂಬಂಧಿತ ಸುದ್ದಿ