ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮಾಜಿ ಅಧ್ಯಕ್ಷರನ್ನು 481 ಮತಗಳಿಂದ ಸೋಲಿಸಿದ ಚೊಚ್ಚಲ ಪ್ರತಿಸ್ಪರ್ಧಿ

ಬಂಟ್ವಾಳ: ತಾಲೂಕಿನ ಅತೀ ದೊಡ್ಡ ಗ್ರಾಮ ಪಂಚಾಯತ್ ಗಳಲ್ಲಿ ಒಂದಾದ ಸಜಿಪಮುನ್ನೂರಿನಲ್ಲಿ ಕೆಲವು ಅಭ್ಯರ್ಥಿಗಳು ಚೊಚ್ಚಲ ಪ್ರಯತ್ನದಲ್ಲೇ ಭಾರೀ ಅಂತರದ ಮತಗಳಿಂದ ಭರ್ಜರಿಯಾಗಿ ಗೆಲುವು ಸಾಧಿಸುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಗ್ರಾಮದ 3ನೇ ವಾರ್ಡ್ ನಲ್ಲಿ ಇಮ್ರಾನ್ ಜಬ್ಬಾರ್ ಎಂಬ ಎಸ್.ಡಿ‌.ಪಿ.ಐ. ಬೆಂಬಲಿತ ಅಭ್ಯರ್ಥಿ, ಗ್ರಾಮ ಪಂಚಾಯತ್ ನ ಮಾಜಿ ಉಪಾಧ್ಯಕ್ಷರೂ, ಅಧ್ಯಕ್ಷರೂ, ಕಾಂಗ್ರೆಸ್ ಮುಖಂಡರೂ ಆದ ಮುಹಮ್ಮದ್ ಶರೀಫ್ ಅವರನ್ನು 481 ಮತಗಳ ಅಂತರದಿಂದ ಸೋಲಿಸಿದ್ದಾರೆ. ಇಮ್ರಾನ್ ಜಬ್ಬಾರ್ 810 ಮತಗಳನ್ನು ಪಡೆದರೆ ಮುಹಮ್ಮದ್ ಶರೀಫ್ 329 ಮತಗಳನ್ನು ಪಡೆದಿದ್ದಾರೆ.

ಹಾಗೆಯೇ 3ನೇ ವಾರ್ಡ್ ನಲ್ಲಿ ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿ ಶಬೀನಾ ಹಮೀದ್ (646 ಮತ) ಎಂಬವರು, ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಝ್ವಹರಾ (175 ಮತ) ಎಂಬವರನ್ನು 471 ಮತಗಳಿಂದ ಸೋಲಿಸಿದ್ದಾರೆ.

3ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ವಹಿದಾ ಬಾನು (625 ಮತ) ಎಂಬವರು, ಕಾಂಗ್ರೆಸ್ ಬೆಂಬಲಿತ ಸೆಲೀನಾ (162 ಮತ) ಎಂಬವರನ್ನು 460 ಮತಗಳ ಅಂತರದಿಂದ ಸೋಲಿಸಿದ್ದಾರೆ.

3ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಅಬೂಬಕ್ಕರ್ ಸಿದ್ದೀಕ್ (717 ಮತ) ಎಂಬವರು ಕಾಂಗ್ರೆಸ್ ಬೆಂಬಲಿತ ಆರೀಫ್ (373 ಮತ) ಎಂಬವರನ್ನು 344 ಮತಗಳ ಅಂತರದಿಂದ ಸೋಲಿಸಿದ್ದಾರೆ.

ಉಳಿದಂತೆ 1ನೇ ವಾರ್ಡ್ ಅನ್ನು ಸತತ ಮೂರು ಬಾರಿ ಪ್ರತಿನಿಧಿಸಿದ ಬಿಜೆಪಿ ಮುಖಂಡ, ಬಿಜೆಪಿ ಬೆಂಬಲಿತ ಅಭ್ಯರ್ಥಿ ಇದಿನಬ್ಬ (459 ಮತ) ಎಂಬವರನ್ನು ಎಸ್.ಡಿ.ಪಿ.ಐ. ಬೆಂಬಲಿತ ಅಭ್ಯರ್ಥಿ ಜಮಾಲುದ್ದೀನ್ (479 ಮತ) ಎಂಬವರು 20 ಮತಗಳ ಅಂತರದಿಂದ ಸೋಲಿಸಿದ್ದಾರೆ.

1ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ರಝೀಯಾ ಲತೀಫ್ (449) ಎಂಬವರು ಕಾಂಗ್ರೆಸ್ ಬೆಂಬಲಿತ ಆಸಿಫಾ ಬೇಗಂ (149) ಎಂಬವರನ್ನು 300 ಮತಗಳಿಂದ ಸೋಲಿಸಿದ್ದಾರೆ.

1ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಸಾಜಿದಾ ಖಾಸಿಮ್ (409) ಎಂಬವರು ಕಾಂಗ್ರೆಸ್ ಬೆಂಬಲಿತ ದುಲ್ಸೀನಾ (121) ಎಂಬವರನ್ನು 288 ಮತಗಳಿಂದ ಸೋಲಿಸಿದ್ದಾರೆ.

1ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಅಬ್ದುಲ್ ಶಮೀರ್ (640) ಎಂಬವರು ಬಿಜೆಪಿಯ ಇದಿನಬ್ಬ (459) ಎಂಬವರನ್ನು 181 ಮತಗಳಿಂದ ಸೋಲಿಸಿದ್ದಾರೆ.

5ನೇ ವಾರ್ಡ್ ನ ಎಸ್.ಡಿ.ಪಿ.ಐ. ನೌರೀನಾ ಸಲೀಂ 557 ಮತ ಪಡೆದರೆ ಪ್ರತಿಸ್ಪರ್ಧಿ ಕಾಂಗ್ರೆಸ್ ಬೆಂಬಲಿತ ಮೈಮೂನಾ 397 ಮತಗಳನ್ನು ಪಡೆದಿದ್ದಾರೆ.

5ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಫೌಝಿಯಾ 545 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ನೂರ್ ಜಹಾನ್ 424 ಮತಗಳನ್ನು ಪಡೆದಿದ್ದಾರೆ.

5ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಪೌಸ್ತಿನ್ ಡಿಸೋಜ 485 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ಪ್ರೇಮಾ 390 ಮತಗಳನ್ನು ಪಡೆದಿದ್ದಾರೆ.

5ನೇ ವಾರ್ಡ್ ನ ಎಸ್.ಡಿ.ಪಿ.ಐ. ಬೆಂಬಲಿತ ಪದ್ಮನಾಭ ಭಂಡಾರಿ 539 ಮತಗಳನ್ನು ಪಡೆದರೆ ಕಾಂಗ್ರೆಸ್ ಬೆಂಬಲಿತ ದನಂಜಯ 442 ಮತಗಳನ್ನು ಪಡೆದಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

31/12/2020 06:51 pm

Cinque Terre

5.79 K

Cinque Terre

0

ಸಂಬಂಧಿತ ಸುದ್ದಿ