ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದ.ಕ. ಜಿಲ್ಲೆಯ ಅತಿ ಹೆಚ್ಚು ಗ್ರಾಪಂ ಹೆಗ್ಗಳಿಕೆಯ ಬಂಟ್ವಾಳದಲ್ಲಿ ಮತ ಎಣಿಕೆ ಶುರು; ಫಲಿತಾಂಶಕ್ಕೆ ಕ್ಷಣಗಣನೆ...

ಬಂಟ್ವಾಳ: ದಕ್ಷಿಣ ಕನ್ನಡ ಜಿಲ್ಲೆಯ ಅತಿ ಹೆಚ್ಚು ಗ್ರಾಪಂಗಳು ಇರುವ ಬಂಟ್ವಾಳದಲ್ಲಿ ಮತ ಎಣಿಕೆ ಮೊಡಂಕಾಪು ಇನ್ಫೆಂಟ್ ಜೀಸಸ್ ಆಂಗ್ಲ ಮತ್ತು ಕನ್ನಡ ಮಾಧ್ಯಮ ಶಾಲೆಗಳಲ್ಲಿರುವ 89 ಎಣಿಕೆ ಟೇಬಲ್ ಗಳಲ್ಲಿ ಆರಂಭಗೊಂಡಿದೆ.

95 ಮೇಲ್ವಿಚಾರಕರು, 190 ಎಣಿಕೆ ಸಹಾಯಕರು ಕರ್ತವ್ಯ ನಿರ್ವಹಿಸುತ್ತಿದ್ದಾರೆ. 50 ಡಿ ಗ್ರೂಪ್ ಸಿಬ್ಬಂದಿ ಸಹಕರಿಸುತ್ತಿದ್ದಾರೆ. ಸುಮಾರು 300ರಷ್ಟು ಪೊಲೀಸರು ಬಿಗಿ ಪಹರೆಯಲ್ಲಿದ್ದಾರೆ. ಸುತ್ತಮುತ್ತ ಸೆ.144 ಅನ್ವಯ ನಿಷೇಧಾಜ್ಞೆ ವಿಧಿಸಲಾಗಿದೆ.

ವಿಜಯೋತ್ಸವ ಆಚರಿಸುವಂತಿಲ್ಲ ಎಂದು ಈಗಾಗಲೇ ಸೂಚಿಸಲಾಗಿದೆ. ಆದರೂ ಹೊರಭಾಗದಲ್ಲಿ ಕುತೂಹಲಿಗರು ಜಮಾಯಿಸಲು ಆರಂಭಿಸಿದ್ದಾರೆ.

ಆರಂಭದಲ್ಲಿ 25 ಮತಪತ್ರಗಳ ಒಂದು ಬಂಡಲ್ ಮಾಡಿ, ಪ್ರಪತ್ರ 28ಕ್ಕು ಮತಪತ್ರಕ್ಕೂ ತಾಳೆ ನೋಡಿ ಮತ ಎಣಿಕೆ ನಡೆಸಲಾಗುತ್ತದೆ. ಮೊದಲ ಸುತ್ತಿನ ಮತ ಎಣಿಕೆ ಸುಮಾರು 10 ಗಂಟೆಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕ್ಷೇತ್ರವಾರು ಘೋಷಣೆಗಳನ್ನು ಅಧಿಕಾರಿಗಳು ನಡೆಸಲಿದ್ದಾರೆ.

ಸಂಗಬೆಟ್ಟು: ಒಟ್ಟು ಸ್ಥಾನ 15, ಕುಕ್ಕಿಪ್ಪಾಡಿ: ಒಟ್ಟು ಸ್ಥಾನ 12, ಚೆನ್ನೈತೋಡಿ: ಒಟ್ಟು ಸ್ಥಾನ 20, ಪಿಲಾತಬೆಟ್ಟು: ಒಟ್ಟು ಸ್ಥಾನ 9,ಇರ್ವತ್ತೂರು: ಒಟ್ಟು ಸ್ಥಾನ 11, ಕಾವಳಪಡೂರು: ಒಟ್ಟು ಸ್ಥಾನ 18, ಕಾವಳಮೂಡೂರು: ಒಟ್ಟು ಸ್ಥಾನ 12, ಉಳಿ: ಒಟ್ಟು ಸ್ಥಾನ 11, ಬಡಗಕಜೆಕಾರು: ಒಟ್ಟು ಸ್ಥಾನ 12, ಸರಪಾಡಿ: ಒಟ್ಟು ಸ್ಥಾನ 11, ಮಣಿನಾಲ್ಕೂರು: ಒಟ್ಟು ಸ್ಥಾನ 13, ನಾವೂರು: ಒಟ್ಟು ಸ್ಥಾನ 17,ಅಮ್ಟಾಡಿ: ಒಟ್ಟು ಸ್ಥಾನ 20, ಬಡಗಬೆಳ್ಳೂರು: ಒಟ್ಟು ಸ್ಥಾನ 13, ಕರಿಯಂಗಳ: ಒಟ್ಟು ಸ್ಥಾನ 12, ಅಮ್ಮುಂಜೆ: ಒಟ್ಟು ಸ್ಥಾನ 13, ಮೇರಮಜಲು: ಒಟ್ಟು ಸ್ಥಾನ 12, ತುಂಬೆ: ಒಟ್ಟು ಸ್ಥಾನ 16, ಕಳ್ಳಿಗೆ: ಒಟ್ಟು ಸ್ಥಾನ 11, ಪಂಜಿಕಲ್ಲು: ಒಟ್ಟು ಸ್ಥಾನ 16, ರಾಯಿ: ಒಟ್ಟು ಸ್ಥಾನ 11, ಅರಳ: ಒಟ್ಟು ಸ್ಥಾನ 10, ನರಿಕೊಂಬು: ಒಟ್ಟು ಸ್ಥಾನ 26, ಬಾಳ್ತಿಲ: ಒಟ್ಟು ಸ್ಥಾನ 16, ಕಡೇಶಿವಾಲಯ: ಒಟ್ಟು ಸ್ಥಾನ 13, ಬರಿಮಾರು: ಒಟ್ಟು ಸ್ಥಾನ 8, ಗೋಳ್ತಮಜಲು: ಒಟ್ಟು ಸ್ಥಾನ 24, ಸಜಿಪಮುನ್ನೂರು: ಒಟ್ಟು ಸ್ಥಾನ 23, ಸಜಿಪಮೂಡ: ಒಟ್ಟು ಸ್ಥಾನ 20, ಸಜಿಪನಡು: ಒಟ್ಟು ಸ್ಥಾನ 15, ಕುರ್ನಾಡು: ಒಟ್ಟು ಸ್ಥಾನ 7, ಸಜಿಪಪಡು: ಒಟ್ಟು ಸ್ಥಾನ 8, ಫಜೀರು: ಒಟ್ಟು ಸ್ಥಾನ 17, ಬಾಳೆಪುಣಿ: ಒಟ್ಟು ಸ್ಥಾನ 29, ನರಿಂಗಾನ: ಒಟ್ಟು ಸ್ಥಾನ 17, ಮಂಚಿ: ಒಟ್ಟು ಸ್ಥಾನ 21, ಇರಾ: ಒಟ್ಟು ಸ್ಥಾನ 19, ಮಾಣಿ: ಒಟ್ಟು ಸ್ಥಾನ 10, ಪೆರಾಜೆ: ಒಟ್ಟು ಸ್ಥಾನ 8, ಕೆದಿಲ: ಒಟ್ಟು ಸ್ಥಾನ 14, ಪೆರ್ನೆ: ಒಟ್ಟು ಸ್ಥಾನ 15, ವೀರಕಂಭ: ಒಟ್ಟು ಸ್ಥಾನ 14, ಬೋಳಂತೂರು: ಒಟ್ಟು ಸ್ಥಾನ 11, ನೆಟ್ಲಮುಡ್ನೂರು: ಒಟ್ಟು ಸ್ಥಾನ 11, ಅನಂತಾಡಿ: ಒಟ್ಟು ಸ್ಥಾನ 7, ಇಡ್ಕಿದು: ಒಟ್ಟು ಸ್ಥಾನ 19, ವಿಟ್ಲಮುಡ್ನೂರು: ಒಟ್ಟು ಸ್ಥಾನ 12, ವಿಟ್ಲಪಡ್ನೂರು: ಒಟ್ಟು ಸ್ಥಾನ 17, ಕೊಳ್ನಾಡು: ಒಟ್ಟು ಸ್ಥಾನ 31, ಸಾಲೆತ್ತೂರು: ಒಟ್ಟು ಸ್ಥಾನ 7, ಕರೋಪಾಡಿ: ಒಟ್ಟು ಸ್ಥಾನ 16, ಕನ್ಯಾನ: ಒಟ್ಟು ಸ್ಥಾನ 20, ಪೆರುವಾಯಿ: ಒಟ್ಟು ಸ್ಥಾನ 8, ಮಾಣಿಲ: ಒಟ್ಟು ಸ್ಥಾನ 8, ಅಳಿಕೆ: ಒಟ್ಟು ಸ್ಥಾನ 15, ಕೇಪು: ಒಟ್ಟು ಸ್ಥಾನ 16, ಪುಣಚ: ಒಟ್ಟು ಸ್ಥಾನ 20, ಗಳಿದ್ದು, ಇವುಗಳ ಪೈಕಿ 15 ಗ್ರಾಪಂಗಳಲ್ಲಿ ಅವಿರೋಧ ಆಯ್ಕೆಯಾಗಿದೆ.

Edited By : Nirmala Aralikatti
Kshetra Samachara

Kshetra Samachara

30/12/2020 08:52 am

Cinque Terre

9.75 K

Cinque Terre

0

ಸಂಬಂಧಿತ ಸುದ್ದಿ