ಮುಲ್ಕಿ: ಮಂಗಳೂರು ನಗರ ಉತ್ತರ ವಿಧಾನಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಪಾಲಿಕೆಯ ಸುರತ್ಕಲ್ ಪಶ್ಚಿಮ ವಾರ್ಡ್ ನಂ1 ರ ಎನ್ ಐಟಿಕೆ ತಡಂಬೈಲ್ ಬಿಎಸ್ಎನ್ಎಲ್ ಆಫೀಸಿನ ಬಳಿ ನೂತನವಾಗಿ ನಿರ್ಮಾಣಗೊಳ್ಳಲಿರುವ ನೀರು ಶೇಖರಣೆ ಘಟಕಕ್ಕೆ ಶಾಸಕ ಡಾ.ವೈ. ಭರತ್ ಶೆಟ್ಟಿ ಶಂಕು ಸ್ಥಾಪನೆ ಮಾಡಿದರು.
ಪಾಲಿಕೆಯ ಕುಡಿಯುವ ನೀರಿನ ಯೋಜನೆ 24*7 ಕ್ಕೆ ರಾಜ್ಯ ಸರಕಾರದ ಜಲಸಿರಿ ಯೋಜನೆ ಮೂಲಕ ಈ ಯೋಜನೆ ಅನುಷ್ಠಾನಗೊಳ್ಳಲಿದೆ.
ಉಪಮೇಯರ್ ವೇದಾವತಿ, ಸ್ಥಳೀಯ ಕಾರ್ಪೊರೇಟರ್ ಶೋಭಾ ರಾಜೇಶ್, ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಗಣೇಶ್ ಹೊಸಬೆಟ್ಟು, ಮಂಡಲ ಉಪಾಧ್ಯಕ್ಷರಾದ ಮಹೇಶ್ ಮೂರ್ತಿ, ವಿಠಲ ಸಾಲ್ಯಾನ್, ಮಂಡಲ ಖಜಾಂಚಿ ಪುಪ್ಪರಾಜ್, ಮಂಡಲ ಕಾರ್ಯದರ್ಶಿ ರಾಘವೇಂದ್ರ ಶೆಣೈ, ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
09/01/2021 02:24 pm