ಬಂಟ್ವಾಳ: ಬಂಟ್ವಾಳ ತಾಲೂಕಿನ ಸಜೀಪಮುನ್ನೂರು ಗ್ರಾಮದ ನಂದಾವರ ಅರಮನೆಹಿತ್ಲು ಎಂಬಲ್ಲಿ ಚುನಾವಣೆ ಬಹಿಷ್ಕಾರದ ಬ್ಯಾನರ್ ಶನಿವಾರ ರಾತ್ರಿ ಬಳಿಕ ಕಂಡುಬಂದಿದೆ.
ನಂದಾವರದಿಂದ ಅರಮನೆಹಿತ್ಲುವರೆಗೆ ಸಂಪರ್ಕ ರಸ್ತೆ ಕಾಮಗಾರಿಗೆ ಅನುದಾನ ದೊರೆತರೂ ಕೆಲಸ ನಡೆಯದ ಕಾರಣ ಗ್ರಾಪಂ ಚುನಾವಣೆ ಬಹಿಷ್ಕರಿಸುತ್ತೇವೆ ಎಂದು ಬ್ಯಾನರ್ ನಲ್ಲಿ ನಮೂದಿಸಲಾಗಿದೆ.
ಇಲ್ಲಿ ಸುಮಾರು 80ರಷ್ಟು ಮತದಾರರಿದ್ದಾರೆ.
Kshetra Samachara
13/12/2020 01:49 pm