ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ ಪುರಸಭೆ ಚುನಾವಣೆ : ಗೆದ್ದು ಬಿಗಿದ ಪ್ರಸಾದ್ ಕುಮಾರ್ , ಸುಜಾತ

2019ರಲ್ಲಿ ಮೂಡುಬಿದಿರೆ ಪುರಸಭೆ ಎಲ್ಲ 23 ವಾರ್ಡ್ ಗಳಿಗೆ ಚುನಾವಣೆ ನಡೆದಿದ್ದು, ಕಾಂಗ್ರೆಸ್ 11 ಸ್ಥಾನ ಹಾಗೂ ಬಿಜೆಪಿ 12 ಸ್ಥಾನಗಳನ್ನು ಗಳಿಸಿತ್ತು.

ಈ ಹಿಂದೆ ಕಾಂಗ್ರೆಸ್ ನ ಪ್ರಾಬಲ್ಯವಿದ್ದ ಪುರಸಭೆಯಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿಯಿಂದ ಅಧ್ಯಕ್ಷ, ಉಪಾಧ್ಯಕ್ಷ ಸ್ಥಾನವನ್ನು ಪಡೆದಿದೆ.

ಸಾಮಾನ್ಯ ಮೀಸಲಾತಿಯನ್ನು ಪಡೆದಿರುವ ಅಧ್ಯಕ್ಷ ಸ್ಥಾನಕ್ಕೆ ವಾರ್ಡ್-14 ಮಾಸ್ತಿಕಟ್ಟೆಯ ಪ್ರಸಾದ್ ಕುಮಾರ್ ಆಯ್ಕೆಯಾಗಿದ್ದಾರೆ.

ಬಿಜೆಪಿಯಿಂದ ಮೂರನೇ ಬಾರಿಗೆ ಸತತವಾಗಿ ಸದಸ್ಯರಾಗಿರುವ ಪ್ರಸಾದ್ ಕುಮಾರ್ ಸಧ್ಯ ಪುರಸಭೆಯಲ್ಲಿರುವ ಬಿಜೆಪಿಯ ಹಿರಿಯ ಸದಸ್ಯರಾಗಿದ್ದಾರೆ.

ಉಪಾಧ್ಯಕ್ಷ ಸ್ಥಾನಕ್ಕೆ ಹಿಂದುಳಿದ ವರ್ಗ ಎ ಮೀಸಲಾತಿ ಪ್ರಕಟಗೊಂಡಿದ್ದು, ಶನಿವಾರ ವಾರ್ಡ್19 ಸುಜಾತ ಅವರು ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ಕಾಂಗ್ರೆಸ್ ನಿಂದ ಅಧ್ಯಕ್ಷ ಸ್ಥಾನಕ್ಕೆ ಪಿ.ಕೆ ಥೋಮಸ್ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮಮತಾ ನಾಮಪತ್ರ ಸಲ್ಲಿಸಿದ್ದರು.

Edited By : Nirmala Aralikatti
Kshetra Samachara

Kshetra Samachara

07/11/2020 01:30 pm

Cinque Terre

5.02 K

Cinque Terre

0

ಸಂಬಂಧಿತ ಸುದ್ದಿ