ಮಂಗಳೂರು: ಕಂದಾವರ ಗ್ರಾಪಂ ವ್ಯಾಪ್ತಿಯ ಕಂದಾವರ ಚರ್ಚ್ ಹಿಂಬದಿಯ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮಂಗಳೂರು ಉತ್ತರ ಮಾಜಿ ಶಾಸಕ ಮೊಯ್ದೀನ್ ಬಾವ ಸೋಮವಾರ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತಾನು ಶಾಸಕನಾಗಿದ್ದಾಗ ಸರಕಾರದಿಂದ ಬಿಡುಗಡೆಗೊಂಡಿದ್ದ ಅನೇಕ ಅನುದಾನಗಳನ್ನು ಇದೀಗ ಹಾಲಿ ಶಾಸಕರು ಅವರಿಗೆ ಬೇಕಾದಂತೆ ಬೇಕಾದ ಪಂಚಾಯತ್‌ಗಳಿಗೆ ರವಾನಿಸುತ್ತಿದ್ದಾರೆ ಎಂದರು.
ಜಿ.ಪಂ. ಸದಸ್ಯ ಯು.ಪಿ. ಇಬ್ರಾಹಿಂ, ಕಂದಾವರ ಗ್ರಾ.ಪಂ. ನಿಕಟಪೂರ್ವ ಅಧ್ಯಕ್ಷೆ ವಿಜಯಾ ಗೋಪಾಲ ಸುವರ್ಣ , ಗ್ರಾಪಂ ನಿಕಟಪೂರ್ವ ಉಪಾಧ್ಯಕ್ಷ ದೇವೇಂದ್ರ, ಇಂಟಕ್ ಮುಖಂಡ ಸಂಪತ್ ಲೋಬೊ, ಕಾಂಗ್ರೆಸ್ ಪ್ರಮುಖರಾದ ಹೆರಾಲ್ಡ್ ಲೋಬೊ, ಬೂಬ ಪೂಜಾರಿ, ವೀಣಾ ಡಿಸೋಜ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/10/2020 10:41 pm