ಬಂಟ್ವಾಳ: ಬೆಂಕಿ ತಗುಲಿ ಚಿಂತಾಜನಕ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದ ಮಹಿಳೆಯೋರ್ವಳು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟ ಘಟನೆ ಜೂನ್ 6.ರಂದು ಮಧ್ಯ ರಾತ್ರಿ ವೇಳೆ ನಡೆದಿದೆ.
ಅಮ್ಮುಂಜೆ ಗ್ರಾಮದ ಶಿವಾಜಿನಗರ ನವಗ್ರಾಮ ಸೈಟ್ ನಿವಾಸಿ ಪದ್ಮನಾಭ ಪೂಜಾರಿ ಅವರ ಪತ್ನಿ ಗಿರಿಜಾ (57) ಮೃತ ಮಹಿಳೆ.
ಮೇ.30 ರಂದು ಸಂಜೆ ವೇಳೆ ಗಿರಿಜಾ ಅವರು ಸ್ನಾನ ಮಾಡಲು ಬಿಸಿ ನೀರು ಕಾಯಿಸಲು ಬಚ್ಚಲು ಕೊಟ್ಟಿಗೆಯ ಒಲೆಗೆ ಬೆಂಕಿ ಹಾಕುತ್ತಿದ್ದ ವೇಳೆ ತೆಂಗಿನ ಗರಿಯಿಂದ ಬೆಂಕಿ ಗಿರಿಜಾ ಅವರ ಉಟ್ಟ ಸೀರೆಗೆ ತಗುಲಿತ್ತು.
ಇದರಿಂದ ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲ ನೀಡದೆ ಅವರು ಸೋಮವಾರ ಮಧ್ಯ ರಾತ್ರಿ ವೇಳೆ ಮೃತಪಟ್ಟಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೋಲೀಸ್ ಠಾಣೆಯ ಲ್ಲಿ ಪ್ರಕರಣ ದಾಖಲಾಗಿದೆ.
Kshetra Samachara
07/06/2022 08:38 pm