ಮಂಗಳೂರು: ನಗರದ ಹೊರವಲಯದ ಆಕಾಶಭವನದ ಕಾಪ್ರಿಗುಡ್ಡೆಯಲ್ಲಿ ಅಂಗನವಾಡಿ ಕೇಂದ್ರವನ್ನು ಎಂಸಿಎಫ್ ಸಂಸ್ಥೆಯು ಶಾಸಕ ಡಾ.ಭರತ್ ಶೆಟ್ಟಿಯವರ ಮನವಿ ಮೇರೆಗೆ ಮಂಗಳ ಅಕ್ಷರ ಮಿತ್ರ ಯೋಜನೆಯಡಿ ಸಿಎಸ್ ಆರ್ ನಿಧಿಯಿಂದ ನವೀಕರಣ ಮಾಡಿದ್ದು ಶಾಸಕ ಡಾ.ಭರತ್ ಶೆಟ್ಟಿಯವರು ಶನಿವಾರ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಶಾಸಕರನ್ನು ಗೌರವಿಸಲಾಯಿತು
ಕಾರ್ಪೊರೇಟರ್ ಗಾಯತ್ರಿ ಎ. ರಾವ್ ಅಧ್ಯಕ್ಷ ತೆ ವಹಿಸಿದ್ದರು.ಎಂಸಿಎಫ್ ಅಧಿಕಾರಿ ಮುಖ್ಯ ಉತ್ಪಾದಾನಾಧಿಕಾರಿ ಎಸ್.ಗಿರೀಶ್, ಜಿ.ಎಂ ಸದಾನಂದ್, ಶಿಶು ಅಭಿವೃದ್ದಿ ಯೋಜನೆ ವಿಭಾಗ ಹರೀಶ್ ಕೆ, ಎಂಸಿಎಫ್ ಅಧಿಕಾರಿಗಳಾದ ಡಾ.ಯೋಗೀಶ್,ಶೈಲೇಶ್ ಕೆ.ಸದಾನಂದ್ ,ಅವಿನಂದ್, ಅಂಗನವಾಡಿ ,ಶಿಶು ಅಭಿವೃದ್ಧಿ ಇಲಾಖೆ ಅಧಿಕಾರಿಗಳು,ಶಿಕ್ಷಕರು,
ಸ್ಥಳೀಯ ಸಂಘ ಸಂಸ್ಥೆಗಳ ಮುಖಂಡರು ಉಪಸ್ಥಿತರಿದ್ದರು.
Kshetra Samachara
26/03/2022 05:41 pm