ಮುಲ್ಕಿ: ಮುಲ್ಕಿಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಎಂ ವಾಸುದೇವ ಆರ್ ಕುಡ್ವ, ಪದ್ಮಾ ವಿ ಕುಡ್ವ ಸೇವಾರ್ಥ ವೇದಮೂರ್ತಿ ರಾಜೇಶ್ ಭಟ್, ವೆಂಕಟೇಶ ಭಟ್, ಪದ್ಮನಾಭ ಭಟ್ ನೇತೃತ್ವದಲ್ಲಿ ಶ್ರೀನಿವಾಸ ಕಲ್ಯಾಣ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು.
ಬೆಳಿಗ್ಗೆ-9.00 ಗಂಟೆಗೆ ಪ್ರಾರ್ಥನೆ ಬಳಿಕ ಶ್ರೀನಿವಾಸ ಕಲ್ಯಾಣ ಉತ್ಸವ ಪ್ರಾರಂಭವಾಗಿ ಮಧ್ಯಾಹ್ನ-12.30ಕ್ಕೆ ಮಹಾನ್ಯವೇದ್ಯ, ಮಂಗಳಾರತಿ, ದರ್ಶನ ಸೇವೆ, ಸಮಾರಾಧನೆ ನಡೆಯಿತು. ಈ ಸಂದರ್ಭ ದೇವಸ್ಥಾನದ ಟ್ರಸ್ಟಿ ಅತುಲ್ ಕುಡ್ವ, ಆಡಳಿತ ಮಂಡಳಿ , ಭಜಕ ವೃಂದ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
26/03/2022 01:51 pm