ಮುಲ್ಕಿ: ಮುಲ್ಕಿ ಸಮೀಪದ ನಡಿಕುದ್ರು ಶ್ರೀ ಧರ್ಮದೈವ ಜಾರಂದಾಯ ದೈವಸ್ಥಾನ ದ ನೇಮೋತ್ಸವ ಸಂಭ್ರಮದಿಂದ ನಡೆಯಿತು.
ಫೆ.5 ಶನಿವಾರ ಪ್ರಾತಃಕಾಲ ಪಂಚಕಜ್ಜಾಯ ಸೇವೆ, ಸೂರ್ಯಾಸ್ತದಿಂದ ಮರುದಿನ ಸೂರ್ಯೋದಯದವರೆಗೆ ವಿವಿಧ ಭಜನಾ ಮಂಡಳಿಗಳಿಂದ 44ನೇ ವಾರ್ಷಿಕ ಮಂಗಲೋತ್ಸವ ಭಜನಾ ಕಾರ್ಯಕ್ರಮ ನಡೆಯಿತು. ಫೆ. 13 ಭಾನುವಾರ ಬೆಳಿಗ್ಗೆ ವೇ. ಮೂ. ವಾದಿರಾಜ ಉಪಾಧ್ಯಾಯ ನೇತೃತ್ವದಲ್ಲಿ ನವಕ ಕಲಶಾಭಿಷೇಕ, ನಾಗದೇವರಿಗೆ ಹಾಲು ಅಭಿಷೇಕ ,11 ಗಂಟೆಗೆ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ, 12.30ಕ್ಕೆ ಮಹಾ ಸಂತರ್ಪಣೆ, ರಾತ್ರಿ 7 ಗಂಟೆಗೆ ಭಂಡಾರ ಇಳಿಯುವಿಕೆ ಕಾರ್ಯಕ್ರಮ ನಡೆಯಿತು.
ರಾತ್ರಿ 8ಗಂಟೆಗೆ ಅನ್ನಸಂತರ್ಪಣೆ, 9 ಗಂಟೆಗೆ ಮೈಸಂದಾಯ ನೇಮ, 10 ಗಂಟೆಗೆ ಶ್ರೀ ಧರ್ಮದೈವ ಜಾರಂದಾಯ ಬಂಟ ಪರಿವಾರ ದೈವಗಳ ಗಡುಪಾಡು ನೇಮೋತ್ಸವ ವಿಜ್ರಂಭಣೆಯಿಂದ ನಡೆಯಿತು.
ಈ ಸಂದರ್ಭ ನಡಿಕುದ್ರು ಗ್ರಾಮದ ಗುರಿಕಾರರು ಮತ್ತು ಶ್ರೀ ಜಾರಂದಾಯ ಸೇವಾ ಸಮಿತಿ ನಡಿಕುದ್ರು ಮತ್ತು ಮುಂಬೈ, ಸೇವಾ ಯುವಕ ಮತ್ತು ಮಹಿಳಾ ವೃಂದ ನಡಿಕುದ್ರು ಉಪಸ್ಥಿತರಿದ್ದರು.
Kshetra Samachara
14/02/2022 08:45 am