ಮುಲ್ಕಿ:ಜೆಸಿಐ ಮುಲ್ಕಿ ಶಾಂಭವಿ ,ರೊಟರಿ ಕ್ಲಬ್ ,ಶ್ರೀ ಶಿವಯೋಗೀಶ್ವರ ಮಂದಿರ ಲಿಂಗಪ್ಪಯ್ಯ ಕಾಡು ಮತ್ತು ಶ್ರೀ ವಿನಾಯಕ ಯವಕ ಮಂಡಲ ಲಿಂಗಪ್ಪಯ್ಯ ಕಾಡು ಸಂಯುಕ್ತ ಆಶ್ರಯದಲ್ಲಿ ಕರ್ನಾಟಕ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯ ಸಹಯೋಗದಲ್ಲಿ ಲಿಂಗಪ್ಪಯ್ಯ ಕಾಡಿನ ಶ್ರೀ ಶಿವಯೋಗೀಶ್ವರ ಮಂದಿರದಲ್ಲಿ ನೋಂದಾಯಿತ ಕಟ್ಟಡ ಮತ್ತು ಇತರ ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವರ ಅವಲಂಬಿತರಿಗೆ ಜರಗಿದ ಆರೋಗ್ಯ ತಪಾಸಣೆ ಮತ್ತು ತರಬೇತಿ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮವನ್ನು ಜೇಸಿಐನ ವಲಯ ಉಪಾಧ್ಯಕ್ಷ ದಿನೇಶ್ ಕೆ ಶೆಟ್ಟಿ ಉದ್ಘಾಟಸಿದರು. ಮುಲ್ಕಿ ಜೆಸಿಐ ಶಾಂಭವಿಯ ಅಧ್ಯಕ್ಷ ಕಲ್ಲಪ್ಪ ತಡವಲಗ ಅಧ್ಯಕ್ಷತೆಯನ್ನು ವಹಿಸಿದ್ದರು.
ಮೂಲ್ಕಿ ನಪಂ ಸದಸ್ಯ ಮಂಜುನಾಥ ಕಂಬಾರ ,ಮುಲ್ಕಿ ರೋಟರಿ ಕ್ಲಬ್ ಅಧ್ಯಕ್ಷ ಶಿವರಾಮ್ ಜಿ ಅಮೀನ್, ಶಿವಯೋಗೇಶ್ವರ ದೇವಸ್ಥಾನದ ಉಪಾಧ್ಯಕ್ಷ ಶಿವಾನಂದ ಮುರಗಾನೂರ,ಶ್ರೀ ವಿನಾಯಕ ಯುವಕ ಮಂಡಲ ಅಧ್ಯಕ್ಷ ಶಿದ್ದು ತಳವಾರ್,ಡಾ. ಪ್ರಣಾಮ್ ಮತ್ತಿತರರು ಉಪಸ್ತಿತರಿದ್ದರು.
Kshetra Samachara
13/02/2022 09:11 pm