ಮುಲ್ಕಿ: ನಬಾರ್ಡ್ ಕರ್ನಾಟಕದ ಚೀಫ್ ಜನರಲ್ ಮ್ಯಾನೇಜರ್ ನೀರಜ್ ಕುಮಾರ್ ವರ್ಮಾ ಕಿನ್ನಿಗೋಳಿಯ ತಾಳಿಪಾಡಿ ನೇಕಾರ ಸಂಘದಲ್ಲಿ ಕದಿಕೆ ಟ್ರಸ್ಟ್ ನಡೆಸುತ್ತಿರುವ ಉಡುಪಿ ಸೀರೆ ನೇಕಾರಿಕೆ ತರಬೇತಿ ವೀಕ್ಷಿಸಿದರು.
ಅಳಿವಿನಂಚಿನಲ್ಲಿರುವ ಉಡುಪಿ ಸೀರೆ ನೇಕಾರಿಕೆಯ ಪುನಶ್ಚೇತನಕ್ಕೆ ಕಾರ್ಕಳದ ಕದಿಕೆ ಟ್ರಸ್ಟ್ ನಡೆಸುತ್ತಿರುವ ಈ ತರಬೇತಿಯನ್ನು ನಬಾರ್ಡ್ ಕರ್ನಾಟಕ ಪ್ರಾಯೋಜಿಸಿದೆ. ನೀರಜ್ ಕುಮಾರ್ ವರ್ಮಾ ಎಲ್ಲ ಶಿಬಿರಾರ್ಥಿಗಳೊಡನೆ ಸಂವಾದ ನಡೆಸಿ ಅವರು ತಯಾರಿಸಿದ ಉತ್ಪನ್ನ ಕೊಂಡು ಪ್ರೋತ್ಸಾಹಿಸಿ, ಶ್ಲಾಘಿಸಿದರು.
ನಂತರ ನಡೆದ ಸಭೆಯಲ್ಲಿ ಶಿಬಿರಾರ್ಥಿಗಳು ತಮ್ಮ ಅನುಭವ ಹಂಚಿಕೊಂಡರು.
ನಬಾರ್ಡ್ ಮಂಗಳೂರು ಡಿಡಿ ಎಂ ಸಂಗೀತ ಕಟ್ಟರ್ ಅವರು ಶಿಬಿರಾರ್ಥಿಗಳಿಗೆ ಪ್ರೋತ್ಸಾಹದ ನುಡಿಗಳನ್ನಾಡಿದರು.
ಕದಿಕೆ ಟ್ರಸ್ಟ್ ಅಧ್ಯಕ್ಷೆ ಮಮತಾ ರೈ ಪುನಶ್ಚೇತನ ಕೆಲಸದ ಬಗ್ಗೆ ಪವರ್ ಪಾಯಿಂಟ್ ವಿವರಣೆ ಕೊಟ್ಟರು.
ಸಭೆಯಲ್ಲಿ ತಾಳಿಪಾಡಿ ನೇಕಾರ ಸಂಘದ ಅಧ್ಯಕ್ಷ ಆನಂದ ಶೆಟ್ಟಿಗಾರ್ , ನೇಕಾರ ಸಂಘದ ಎಮ್ ಡಿ ಮಾಧವ ಶೆಟ್ಟಿಗಾರ್ , ಸಂಘದ ಸದಸ್ಯರು, ಹಿರಿಯ ನೇಕಾರರು ಉಪಸ್ಥಿತರಿದ್ದರು.
ಕದಿಕೆ ಟ್ರಸ್ಟ್ ಕಾರ್ಯದರ್ಶಿ ಚಿಕ್ಕಪ್ಪ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.
Kshetra Samachara
07/02/2021 10:48 pm