ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಸಾಹಿತಿ ಪಿ.ವಸಂತಿ ಮಾಧವರಾಯ ಭಟ್ ನಿಧನ

ಮೂಡುಬಿದಿರೆ: ಸಮಾಜ, ಸಾಹಿತ್ಯ ಸೇವೆಗೆ ಹೆಸರಾಗಿದ್ದ ದಿ. ಪಿ.ಮಾಧವರಾಯ ಭಟ್ಟರ ಪತ್ನಿ, ಸಾಹಿತಿ ಪಿ.ವಸಂತಿ (82) ಶುಕ್ರವಾರ ರತ್ನಾಕರವರ್ಣಿ ನಗರದಲ್ಲಿರುವ ಸ್ವಗೃಹ ಶ್ರೀ ರಾಮನಾಥ ನಿವಾಸದಲ್ಲಿ ನಿಧನರಾದರು.

ಅವರು ಶ್ರೀ ವೆಂಕಟರಮಣ ಮತ್ತು ಶ್ರೀ ಹನುಮಂತ ದೇವಸ್ಥಾನಗಳ ಮೊಕ್ತೇಸರ ಪಿ.ರಾಮನಾಥ ಭಟ್ ಸಹಿತ ಮೂವರು ಪುತ್ರರು, ಓರ್ವ ಪುತ್ರಿಯನ್ನು ಅಗಲಿದ್ದಾರೆ. ಮೂಲತಃ ಉಡುಪಿಯ ಆಯುರ್ವೇದ ಮನೆತನ ರಂಗಪ್ಪ ವೆಂಕಟೇಶ ಜೋಗಪ್ಪ ಶೆಣೈ ಕುಟುಂಬಕ್ಕೆ ಸೇರಿದ್ದ ಅವರು ಪತಿ ಮಾಧವರಾಯ ಭಟ್ ಅವರ ವಿಶಾಲ ಸಾಹಿತ್ಯ ಮಾಲೆಯ ಮೂಲಕ 60ರ ದಶಕದಲ್ಲಿ ಪ್ರಸ್ತುತ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಚಂದ್ರ ಶೇಖರ ಕಂಬಾರ ಅವರನ್ನು ನಾಡಿಗೆ ಪರಿಚಯಿಸಿದ ಹೆಗ್ಗಳಿಕೆ ಹೊಂದಿದ್ದಾರೆ.

2004ರಲ್ಲಿ ಇದೇ ಕಾರಣಕ್ಕಾಗಿ ಡಾ.ಕಂಬಾರರ ಮೂಲಕ ಅವರು ಮೂಡುಬಿದಿರೆಯಲ್ಲಿ ಸನ್ಮಾನಿತರಾಗಿದ್ದರು.

ಹಿಂದಿ ಭಾಷಾ ವಿಶಾರದೆಯಾಗಿ, ಅನೇಕ ಕಿರುಕೃತಿಗಳು, ಲೇಖನಗಳು, ಧಾರ್ಮಿಕ ಚಿಂತನೆ, ಸಂಕೀರ್ತನೆ ಸೇವೆಯ ಮೂಲಕ ಗುರುತಿಸಿಕೊಂಡಿದ್ದ ಅವರು, ಮೂಡುಬಿದಿರೆ ಇನ್ನರ್ ವೀಲ್ ಕ್ಲಬ್ ಸ್ಥಾಪಕ ಸದಸ್ಯೆಯಾಗಿ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ತೊಡಗಿಸಿಕೊಂಡಿದ್ದರು.

Edited By : Nagaraj Tulugeri
Kshetra Samachara

Kshetra Samachara

05/02/2021 08:57 pm

Cinque Terre

8.46 K

Cinque Terre

0