ಮಂಗಳೂರು: ನಗರ ಹೊರವಲಯದ ಬೈಕಂಪಾಡಿಯ ಸ್ಪ್ರಿಂಗ್ ಉತ್ಪಾದನಾ ಘಟಕವೊಂದರಲ್ಲಿ ಇಂದು ರಾತ್ರಿ ಬೆಂಕಿ ಅವಘಡದಿಂದಾಗಿ ಕೋಟ್ಯಂತರ ರೂ. ನಷ್ಟ ಉಂಟಾಗಿದೆ.
ಈ ಘಟಕ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಏಕೈಕ ಅತ್ಯಾಧುನಿಕ ಸ್ಪ್ರಿಂಗ್ ಉತ್ಪಾದನಾ ಘಟಕವಾಗಿದೆ. ಈ ಅತ್ಯಾಧುನಿಕ ರೋಬೊಟಿಕ್ ಘಟಕದಲ್ಲಿ ವಿದ್ಯುತ್ ಕಡಿತವಾಗಿ ಬೆಂಕಿ ಹತ್ತಿಕೊಂಡಿದೆ. ಸ್ಥಳೀಯ ಎಂಸಿಎಫ್, ಕದ್ರಿ ಅಗ್ನಿಶಾಮಕ ಸಿಬ್ಬಂದಿ ಒಂದೂವರೆ ಗಂಟೆ ತನಕ ಬೆಂಕಿ ನಂದಿಸಲು ಶ್ರಮಿಸಿದರು. ಈ ಘಟಕದಲ್ಲಿ ಸುಮಾರು 90 ಸಾವಿರ ಲೀಟರ್ ಫರ್ನೆಸ್ ಆಯಿಲ್ ಸಂಗ್ರಹವಿದ್ದು, ಇದು ಅಗ್ನಿ ಜ್ವಾಲೆ ಹೆಚ್ಚಲು ಕಾರಣವಾಯಿತು. ಘಟನೆಯ ವೇಳೆ ರಾತ್ರಿ ಪಾಳಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕೆಲವರು ವಿರಾಮ ಸಮಯದಲ್ಲಿ ಚಹಾ ಸೇವಿಸಲು ತೆರಳಿದ್ದರು. ಹೀಗಾಗಿ ಯಾವುದೇ ಪ್ರಾಣಾಪಾಯವಾಗಿಲ್ಲ. ಸ್ಥಳಕ್ಕೆ ಪೊಲೀಸರು ಹಾಗೂ ಕಂಪನಿಯ ಹಿರಿಯ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದರು.
Kshetra Samachara
08/01/2021 11:18 pm