ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ದೈವಸ್ಥಾನದ ಹುಂಡಿಯಲ್ಲಿ ಧಾರ್ಮಿಕ ನಂಬಿಕೆಗೆ ಚ್ಯುತಿ ತರುವ ಬರಹ: ಕಠಿಣ ಕ್ರಮಕ್ಕೆ ಬಿಷಪ್ ಅಗ್ರಹ

ಮಂಗಳೂರು: ನಗರದ ಮೂರು ದೈವಸ್ಥಾನಗಳ ಹುಂಡಿಯಲ್ಲಿ ನೋಟಿನ ಮೇಲೆ ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿ ಬರಹ ಹಾಗೂ ಕಾಂಡೋಮ್ ಕಂಡು ಬಂದಿರೋದು ಖೇದಕರ ಸಂಗತಿ.

ಕೃತ್ಯ ಎಸಗಿದವರನ್ನು ತಕ್ಷಣ ಪತ್ತೆ ಹಚ್ಚಿ ಜಿಲ್ಲಾಡಳಿತ ಹಾಗೂ ಪೊಲೀಸ್ ಅಧಿಕಾರಿಗಳು ಕಠಿಣ ಕ್ರಮ ಕೈಗೊಳ್ಳಬೇಕೆಂದು ಮಂಗಳೂರು ಧರ್ಮಪ್ರಾಂತ್ಯದ ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಆಗ್ರಹಿಸಿದ್ದಾರೆ.

ಯಾವುದೇ ಧರ್ಮದ ಜನರ ಧಾರ್ಮಿಕ ನಂಬಿಕೆಗಳಿಗೆ ಚ್ಯುತಿ ಬರುವಂತೆ ನಡೆದುಕೊಳ್ಳುವುದು ಸರಿಯಲ್ಲ‌.

ಇದು ಅವಿವೇಕಿಗಳ ಹಾಗೂ ಹೇಡಿಗಳ ಕೃತ್ಯವಾಗಿದ್ದು, ಇದು ಅಕ್ಷಮ್ಯ ಅಪರಾಧವಾಗಿದೆ. ಇದರಿಂದ ಕೃತ್ಯ ಎಸಗಿದವನ ವಿಕೃತ ಮನಸ್ಸು ಯಾವ ರೀತಿಯದ್ದು ಎಂದು ತಿಳಿದು ಬರುತ್ತದೆ ಎಂದರು.

ಇನ್ನೊಂದು ಧರ್ಮದ ಧಾರ್ಮಿಕ ನಂಬಿಕೆಗೆ ಮಸಿಬಳಿಯುವ ಇರಾದೆಯಿಂದ ಹಾಗೂ ಸಮಾಜದ ಶಾಂತಿ, ಕೋಮು ಸಾಮರಸ್ಯ ಕದಡಲು ಈ ರೀತಿಯ ಕೃತ್ಯ ಎಸಗಲಾಗಿದೆ.

ಇಂತಹ ಘಟನೆಗಳು ಮತ್ತೆ ನಡೆಯದಂತೆ ಜಿಲ್ಲಾಡಳಿತ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಬಿಷಪ್ ಅ.ವಂ.ಡಾ.ಪೀಟರ್ ಪಾವ್ಲ್ ಸಲ್ಡಾನಾ ಆಗ್ರಹಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

05/01/2021 09:39 am

Cinque Terre

12.27 K

Cinque Terre

0