ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮುಲ್ಕಿ: ಕಟೀಲ್ ಎಕ್ಕಾರ್ ಲಯನ್ಸ್ ನಿಂದ ಅಕ್ಕಿ ವಿತರಣೆ

ಮುಲ್ಕಿ: ಕ್ರಿಸ್ಮಸ್ ಪ್ರಯುಕ್ತ ಲಯನ್ಸ್ ಕ್ಲಬ್ ಕಟೀಲ್ ಎಕ್ಕಾರ್ ವತಿಯಿಂದ 5 ಬಡ ಕುಟುಂಬಗಳಿಗೆ ಅಕ್ಕಿ ಮತ್ತು ಇತರ ಆಹಾರ ಪದಾರ್ಥವನ್ನು ಅಧ್ಯಕ್ಷ ಸ್ಟ್ಯಾನಿ ಪಿಂಟೋ ನೇತೃತ್ವದಲ್ಲಿ ವಿತರಿಸಲಾಯಿತು. ಈ ಸಂದರ್ಭ ಅವರು ಮಾತನಾಡಿ, ಭಾರತವು ಹಬ್ಬಗಳ ನಾಡಾಗಿದೆ. ಬಹುವೈವಿಧ್ಯತೆಯಿಂದ ಕಂಗೊಳಿಸುತ್ತಿರುವ ನಮ್ಮ ದೇಶದ ಸಂಸ್ಕೃತಿಗೆ ಇಲ್ಲಿನ ಮತ-ಧರ್ಮಗಳು ಹಲವಾರು ಹಬ್ಬಗಳನ್ನು ಕೊಡುಗೆಗಳಾಗಿ ನೀಡಿವೆ. ಹಬ್ಬಗಳು ನಮ್ಮ ಸಂಸ್ಕೃತಿಯ ಜೀವಾಳ. ಈ ಸಂ ದರ್ಭ ಜನರು ಜಾತಿ, ಮತ ಬೇಧ ಮರೆತು ಕ್ರಿಸ್ಮಸ್ ಹಬ್ಬದ ಸಡಗರದಲ್ಲಿ ಪಾಲ್ಗೊಂಡು ಬಡವರಿಗೆ ತಮ್ಮಿಂದಾದಷ್ಟು ಸಹಾಯ ಮಾಡುತ್ತಾರೆ ಎಂದರು.

ಕಟೀಲ್ ಎಕ್ಕಾರ್ ಲಯನ್ಸ್ ಕ್ಲಬ್ ಕಾರ್ಯದರ್ಶಿ ಚಂದ್ರಶೇಖರ, ರೋನಾಲ್ಡ್ ಡಿಸೋಜ,ಗಂಗಾಧರ್, ಬೆಲ್ಚರ್ ಮಸ್ಕರೇನಸ್ ಮತ್ತಿತರರು ಉಪಸ್ಥಿತರಿದ್ದರು.

Edited By : Vijay Kumar
Kshetra Samachara

Kshetra Samachara

25/12/2020 03:37 pm

Cinque Terre

3.86 K

Cinque Terre

0