ಮೂಡುಬಿದಿರೆ: ಆಗಸ್ಟ್ 4 ರಂದು ಅಂತರ್ಜಲವನ್ನು ವಿವೇಚನಾ ರಹಿತವಾಗಿ ಬಳಸುವುದನ್ನು ಹಾಗೂ ಅಂತರ್ಜಲ ಲಭ್ಯತೆ ಅನುಸಾರ ಬಳಸದೆ ಇರುವ ಕಾರಣ ಅಂತರ್ಜಲ ಮಟ್ಟವು ಕುಸಿಯುತ್ತಿರುವುದನ್ನು ನಿಯಂತ್ರಿಸಲು ಮತ್ತು ಮಾನ್ಯ ರಾಷ್ಟ್ರೀಯ ಹಸಿರು ಪೀಠ ಆದೇಶದನ್ವಯ ಹಾಗೂ ಕರ್ನಾಟಕ ಅಂತರ್ಜಲ ಪ್ರಾಧಿಕಾರದ ಸಭೆ ನಡವಳಿ ದಿನಾಂಕ 18.09.2018ರಂತೆ ಕೈಗಾರಿಕಾ, ವಾಣಿಜ್ಯ, ಮನರಂಜನೆ, ಮತ್ತು ಇತರೆ ಉದ್ದೇಶಕ್ಕಾಗಿ ಬಳಸುತ್ತಿರುವವರಿಗೆ ಅಂತರ್ಜಲ ಪ್ರಾಧಿಕಾರದಿಂದ ಅನುಮತಿ ಪಡೆಯಲು ಆದೇಶಿಸಿರುತ್ತಾರೆ.
ಮೂಡುಬಿದಿರೆ ಪುರಸಭಾ ವ್ಯಾಪ್ತಿಯ ವಸತಿ ಸಮುಚ್ಚಯ ವಾಣಿಜ್ಯ, ಮನರಂಜನೆ, ಮತ್ತು ಇತರೆ ಉದ್ದೇಶಕ್ಕಾಗಿ ಅಂತರ್ಜಲ ಬಳಸುತ್ತಿರುವವರ ಮಾಲಕರ ಹೆಸರು, ವಿಳಾಸ, ಕಟ್ಟಡ ಸಂಖ್ಯೆ, ಜಾಗದ ಸರ್ವೆ ನಂ., ಖಾತಾ ಮತ್ತು ದೂರವಾಣಿ ಸಂಖ್ಯೆಗಳ ವಿವರಗಳನ್ನು ಮೂಡುಬಿದಿರೆ ಪುರಸಭಾ ಕಛೇರಿಗೆ ಸಲ್ಲಿಸುವಂತೆ ಪುರಸಭಾಧ್ಯಕ್ಷ ಪ್ರಸಾದ್‌ಕುಮಾರ್ ಮತ್ತು ಮುಖ್ಯಾಧಿಕಾರಿ ಇಂದು ಎಂ. ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
13/10/2022 10:24 pm