ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಟೀಲು:22 ವರ್ಷಗಳಿಂದ ಹರಕೆಯ ಸೇವೆಯ ವೇಷ,ಸನ್ಮಾನ

ಬಜಪೆ:ನವರಾತ್ರಿ ಪೂಜಾ ಮಹೋತ್ಸವದ ಲಲಿತಾ ಪಂಚಮಿಯ ಶುಭದಿನದಂದು ಕೊಡೆತ್ತೂರು ಮೂಡುಮನೆಯಿಂದ ಕಟೀಲು ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನಕ್ಕೆ ತೆರಳುವ ಮೆರವಣಿಗೆಯಲ್ಲಿ ಕಳೆದ 22 ವರ್ಷಗಳಿಂದ ಹರಕೆಯ ಸೇವೆಯ ವೇಷವನ್ನು ಹಾಕಿಕೊಂಡು 2022ರ ಸಿಎ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕದೊಂದಿಗೆ ತೇರ್ಗಡೆಯಾದ ಶಯನ್. ವೈ ಶೆಟ್ಟಿ ಅವರನ್ನು ಕೊಡೆತ್ತೂರು ನವರಾತ್ರಿ ಮೆರವಣಿಗೆ ಸಮಿತಿ ಹಾಗೂ ಊರವರ ಪರವಾಗಿ ಮುಲ್ಕಿ-ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಅವರು ಸನ್ಮಾನಿಸಿದರು.

ಈ ಸಂದರ್ಭ ಸಮಿತಿಯ ಅಧ್ಯಕ್ಷ ಶಶಿಧರ ಶೆಟ್ಟಿ ಕೆರಮ ಕೊಡೆತ್ತೂರು ,ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ,ಜಯರಾಮ ಮುಕ್ಕಾಲ್ದಿ ,ಭುವನಾಭಿರಾಮ ಉಡುಪ, ಈಶ್ವರ್ ಕಟೀಲ್, ಕಸ್ತೂರಿ ಪಂಜ, ಬ್ರಿಜೇಶ್ ಚೌಟ ಹಾಗೂ ಮೊದಲಾದವರು ಹಾಜರಿದ್ದರು

Edited By : PublicNext Desk
Kshetra Samachara

Kshetra Samachara

03/10/2022 11:57 am

Cinque Terre

5.38 K

Cinque Terre

0

ಸಂಬಂಧಿತ ಸುದ್ದಿ