ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣಾಪುರ:ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರ

ಸುರತ್ಕಲ್ :ಭಾರತೀಯ ಜನತಾ ಪಾರ್ಟಿ, 4 ನೇ ವಾರ್ಡ್, ಯುವಕ ಮಂಡಲ ( ರಿ), ಕೃಷ್ಣಾಪುರ - ಕಾಟಿಪಳ್ಳ ಸುವರ್ಣ ಸಂಭ್ರಮ ಸಮಿತಿ, ಪ್ರಾಥಮಿಕ ಆರೋಗ್ಯ ಕೇಂದ್ರ, ಸುರತ್ಕಲ್, ಗ್ರಾಮ ಒನ್ ನಾಗರಿಕ ಸೇವಾ ಕೇಂದ್ರ ಇದರ ಸಹಯೋಗದಲ್ಲಿ ಉಚಿತ ಅಭಾ ಕಾರ್ಡ್ ನೋಂದಣಿ ಶಿಬಿರಕ್ಕೆ ಮಂಗಳೂರು ಉತ್ತರ ಶಾಸಕ ಡಾ.ಭರತ್ ಶೆಟ್ಟಿ ಅವರು ಇಂದು ಚಾಲನೆ ನೀಡಿದರು.ಶಿಬಿರವು ಎರಡು ದಿನ ನಡೆಯಲಿದ್ದು, ನಾಗರಿಕರು ಇದರ ಪ್ರಯೋಜನ ಪಡೆದುಕೊಳ್ಳಲು ಮನವಿ ಮಾಡಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿ ಮಂಡಲ ಅಧ್ಯಕ್ಷತಿಲಕ್ ರಾಜ್ ಕೃಷ್ಣಾಪುರ, ಮನಪಾ ಸದಸ್ಯ ಲಕ್ಷ್ಮೀ ಶೇಖರ ದೇವಾಡಿಗ, ಪಾಲಿಕೆ ನಾಮನಿರ್ದೇಶಿತ ಸದಸ್ಯ ಪ್ರಶಾಂತ್ ಮುಡೈಕೋಡಿ, ಯುವಮೋರ್ಚಾ ಅಧ್ಯಕ್ಷ ಭರತ್ ರಾಜ್ ಕೃಷ್ಣಾಪುರ, ಪ್ರಮುಖರಾದ

ಶಿವಪ್ರಸಾದ್ ಬೊಳ್ಳಾಜೆ, ರಾಕೇಶ್ ಕೋಟ್ಯಾನ್, ಸದಾನಂದ ಸನಿಲ್,ಪ್ರಶಾಂತ್ ಆಚಾರ್ಯ, ರೋಶನ್ ಶೆಟ್ಟಿ, ಸತೀಶ್ ಸಾಲ್ಯಾನ್

ಶೇಖರ ದೇವಾಡಿಗ, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

24/09/2022 06:20 pm

Cinque Terre

374

Cinque Terre

0

ಸಂಬಂಧಿತ ಸುದ್ದಿ