ಬಜಪೆ: ಬಡವರ ಕಣ್ಣೊರೆಸುವ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ವಿಜಯ ಯುವ ಸಂಗಮದ ಕಾರ್ಯ ಶ್ಲಾಘನೀಯ ಎಂದು ಮೂಲ್ಕಿ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹೇಳಿದರು.
ಅವರು ಪ್ರಧಾನಿ ನರೇಂದ್ರ ಮೋದಿಯವರ ಹುಟ್ಟು ಹಬ್ಬದ ಪ್ರಯುಕ್ತ ಎಕ್ಕಾರು ವಿಜಯ ಯುವ ಸಂಗಮದ ವತಿಯಿಂದ ಗಿರಿಜಾ ತುಕರಾಮ ಅವರಿಗೆ ನಿರ್ಮಿಸಿದ ಮನೆಯ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸಂಗಮವು ಅನೇಕ ಕುಟುಂಗಳಿಗೆ ಬೆನ್ನೆಲುಬಾಗಿದ್ದು ಮೂರು ಬಡ ಕುಟುಂಬಗಳಿಗೆ ಮನೆ ನಿರ್ಮಿಸಿ ಹಸ್ತಾಂತರಿಸಿದ್ದಾರೆ.
ನವಜ್ಯೋತಿ ನೀರುಡೆ ಮತ್ತು ಜುನೀಯರ್ ಬಾಯ್ಸ್ ನೀರುಡೆ ಸಂಸ್ಥೆ ಮನೆ ನಿರ್ಮಾಣಕ್ಕೆ ಸಹಕಾರ ನೀಡಿದರು, ರವೀಶ್ ಮತ್ತು ಬಳಗ ಈ ಬಡ ಕುಟುಂಬಕ್ಕೆ ಒಂದು ತಿಂಗಳ ದಿನಸಿಯನ್ನು ಒದಗಿಸಿದರು. ಕಾರ್ಯಕ್ರಮದಲ್ಲಿ ಪಂಚಾಯ್ ಅಧ್ಯಕ್ಷೆ ಸುರೇಖ ರೈ, ಬಿಜೆಪಿ ಮುಖಂಡರಾದ ಈಶ್ವರ್ ಕಟೀಲ್, ಕಸ್ತೂರಿ ಪಂಜ, ಲೋಕಯ್ಯ ಸಾಲಿಯಾನ್ ಕೊಂಡೇಲ, ಸದಾಶಿವ ಶೆಟ್ಟಿ ಮೆಲೆಕ್ಕಾರು, ಎಕ್ಕಾರು ಪಂಚಾಯತ್ ಸದಸ್ಯರಾದ ಶಶಿಕಲಾ, ಜಾನಕಿ, ಸತೀಶ್ ಶೆಟ್ಟಿ, ವಿಕ್ರಮ್ ಮಾಡ, ಸಂಸ್ಥೆಯ ಅಧ್ಯಕ್ಷರಾದ ಮನೋಹರ್ ಶೆಟ್ಟಿ, ಆದರ್ಶ್ ಶೆಟ್ಟಿ ಎಕ್ಕಾರು ಮತ್ತಿತರರು ಉಪಸ್ಥಿತರಿದ್ದರು. ಸಂಸ್ಥೆಯ ಗೌರವಾಧ್ಯಕ್ಷ ರತ್ನಾಕರ ಶೆಟ್ಟಿ ಎಕ್ಕಾರು ಪ್ರಸ್ತಾವನೆಗೈದು ಸ್ವಾಗತಿಸಿದರು. ನಿತೀಶ್ ಶೆಟ್ಟಿ ಎಕ್ಕಾರು ನಿರೂಪಿಸಿದರು.
Kshetra Samachara
20/09/2022 09:44 am