ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಮೂಡುಬಿದಿರೆ: ಆತ್ಮವಿಶ್ವಾಸದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದದ್ದು ಪ್ರಸ್ತುತ ಸಮಾಜದಲ್ಲಿ ಅಗತ್ಯ: ಶ್ವೇತಾ ಜೈನ್

ಮೂಡುಬಿದಿರೆ: ಶಿಕ್ಷಣ ಅನ್ನವನ್ನು ನೀಡಿದರೆ, ಉತ್ತಮ ಸಂಸ್ಕಾರ ಬದುಕಿಗೆ ಅರ್ಥವನ್ನು ನೀಡುತ್ತದೆ. ಹಾಗಾಗಿ ಪ್ರತಿಯೊಬ್ಬರೂ ಉತ್ತಮ ಸಂಸ್ಕಾರವನ್ನು ಅಳವಡಿಸಿಕೊಳ್ಳವುದು ಮುಖ್ಯ ಎಂದು ಖ್ಯಾತ ನ್ಯಾಯವಾದಿ ನೋಟರಿ ಶ್ವೇತಾ ಜೈನ್ ಹೇಳಿದರು.

ಅವರು ಆಳ್ವಾಸ್ ಪದವಿ ಪೂರ್ವ ಕಾಲೇಜು ಆಂತರಿಕ ನಿರ್ವಹಣಾ ಸಮಿತಿ ವತಿಯಿಂದ ಆಯೋಜಿಸಿದ್ದ ‘ಪೋಷ್ ಕಾಯಿದೆ ಕುರಿತು ಜಾಗೃತಿ ಕರ‍್ಯಗಾರ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.

ಅತಿಯಾದ ವಿಶ್ವಾಸ ಸಲ್ಲದು ಪುರಾತನ ಕಾಲದಲ್ಲೂ ಸ್ತ್ರೀ ಮಹತ್ವವಾದ ಸ್ಥಾನ ನೀಡಲಾಗಿತ್ತು. ಇಂದು ಮಹಿಳೆ ಎಲ್ಲಾ ಕ್ಷೇತ್ರದಲ್ಲೂ ಉನ್ನತವಾದುದ್ದನ್ನೆ ಸಾದಿಸುತ್ತಿದ್ದಾಳೆ. ಆದರೆ ಆಕೆಯ ಮೇಲೆ ದೌರ್ಜನ್ಯ ನಿಂತಿಲ್ಲ. ಸ್ತ್ರೀ ಪ್ರತಿದಿನ ನೂರಾರು ಸಮಸ್ಯೆಗಳಿಗೆ ಒಳಗಾಗುತ್ತಿದ್ದಾಳೆ. ಹೆಣ್ಣು ಮಕ್ಕಳು ಗೌರವಯುತವಾಗಿ ಸಮಾಜದಲ್ಲಿ ಬದುಕಬೇಕು ಎಂಬ ನಿಟ್ಟಿನಲ್ಲಿ ಕಾನೂನು ಅಡಿಯಲ್ಲಿ ಅನೇಕ ಕಾಯ್ದೆಗಳನ್ನು ರೂಪಿಸಲಾಗಿದೆ. ಅದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಇನ್ನೊಬ್ಬರ ಮೇಲೆ ಅತಿಯಾದ ವಿಶ್ವಾಸ ಸಲ್ಲದು. ಆದರೆ ಆತ್ಮವಿಶ್ವಾಸದಿಂದ ತನ್ನನ್ನು ತಾನು ರಕ್ಷಿಸಿಕೊಳ್ಳಬೇಕಾದದ್ದು ಪ್ರಸ್ತುತ ಸಮಾಜದಲ್ಲಿ ಅಗತ್ಯವಾದದ್ದು ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.

ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಮಹಮ್ಮದ್ ಸದಾಕತ್ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ಕಾರ್ಯಕ್ರಮದಲ್ಲಿ ಗಣಿತಶಾಸ್ತ್ರ ವಿಭಾಗದ ಮುಖ್ಯಸ್ಥೆ ಜಾನ್ಸಿ ಪಿ.ಏನ್, ಜೀವಶಾಸ್ತ್ರ ವಿಭಾಗದ ಸಂಯೋಜಕಿ ಜ್ಯೋತಿ ಎಮ್, ಭೌತಶಾಸ್ತ್ರ ವಿಭಾಗದ ಉಪನ್ಯಾಸಕಿ ರಮಿತಾ ಹಾಗೂ ಆಂತರಿಕ ನಿರ್ವಹಣಾ ಸಮಿತಿಯ ಸಂಯೋಜಕಿ ಡಾ. ಸುಲತಾ ಉಪಸ್ಥಿತರಿದ್ದರು.

ಕಾರ್ಯಕ್ರಮವನ್ನು ಆಳ್ವಾಸ್ ಪದವಿ ಪೂರ್ವ ಕನ್ನಡ ವಿಭಾಗದ ಉಪನ್ಯಾಸಕಿ ಉಷಾ ಬಿ ನಿರೂಪಿಸಿದರು. ರಸಾಯನ ಶಾಸ್ತ್ರ ವಿಭಾಗದ ಉಪನ್ಯಾಸಕಿ ಶ್ರೀವಿದ್ಯಾ ವಂದಿಸಿದರು.

Edited By : PublicNext Desk
Kshetra Samachara

Kshetra Samachara

16/09/2022 07:27 pm

Cinque Terre

1.55 K

Cinque Terre

0

ಸಂಬಂಧಿತ ಸುದ್ದಿ