ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸದೃಢವಾದ ಸಮಾಜ ಕಟ್ಟಲು ಶಿಕ್ಷಣ ಕ್ಷೇತ್ರದಿಂದ ಮಾತ್ರ ಸಾಧ್ಯ : ಆಯನೂರು ಮಂಜುನಾಥ

ಮೂಡುಬಿದಿರೆ : ನಮ್ಮ ದೇಶ ಹಾಗೂ ಸದೃಢವಾದ ಸಮಾಜ ಕಟ್ಟಬಲ್ಲಂತ ಸಾಮರ್ಥ್ಯವಿರುವ ಏಕೈಕ ಸಮರ್ಥ ಕ್ಷೇತ್ರವೆಂದರೆ ಅದು ಶಿಕ್ಷಣ ಕ್ಷೇತ್ರಕ್ಕೆ ಮಾತ್ರ. ಮಕ್ಕಳಿಗೆ ಪಠ್ಯಪುಸ್ತಕದಲ್ಲಿ ಇರುವುದನ್ನು ಮಾತ್ರ ಹೇಳುವುದಲ್ಲದೆ, ಅವರ ಪ್ರತಿಭೆಯನ್ನು ಗುರುತಿಸಿ ಪ್ರೋತ್ಸಾಹಿಸಬೇಕು ಮುಖ್ಯ ಅತಿಥಿ ವಿಧಾನ ಪರಿಷತ್ ಸದಸ್ಯ ಆಯನೂರು ಮಂಜುನಾಥ ಹೇಳಿದರು.

ಅವರು ಇಲ್ಲಿನ ಕನ್ನಡ ಭವನದಲ್ಲಿ ಭಾನುವಾರ ದ.ಕ. ಜಿಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಚಾರ್ಯರ ಸಂಘ (ರಿ.) ವಿವಿಧ ವಿಷಯವಾರು ಉಪನ್ಯಾಸಕರ ಸಂಘಗಳು, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಮಂಗಳೂರು ದ.ಕ.

ಹಾಗೂಆಳ್ವಾಸ್ ಪದವಿ ಪೂರ್ವ ಕಾಲೇಜು ಮೂಡುಬಿದಿರೆ, ದ.ಕ. ಜಿಲ್ಲೆ ಇವರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಶಿಕ್ಷಕರ ದಿನಾಚರಣೆ ಹಾಗೂ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಮಾತನಾಡಿದರು.

"ಬದುಕಿನಲ್ಲಿ ಶಿಕ್ಷಕರು ತರಗತಿಯ ಒಳಗೆ ಕಲಿಸುವುದಾದರೆ ಮತ್ತು ಇನ್ನು ಕೆಲ ಜನರು ಹೊರಗಡೆ ಕಲಿಸಿಕೊಡುತ್ತಾರೆ ಆದರೆ ಕಲಿಯುವ ಆಸಕ್ತಿ ತೆರೆದ ಮನಸ್ಸು ನಮ್ಮದಾಗಿರಬೇಕು" ಎಂದರು.

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಅಧ್ಯಕ್ಷತೆ ವಹಿಸಿ ಮಾತನಾಡಿ ಪದವಿ ಪೂರ್ವ ಎನ್ನುವುದು ವಿದ್ಯಾರ್ಥಿಯ ಜೀವನದಲ್ಲಿ ಒಂದು ಅರ್ಥಪೂರ್ಣವಾದ ಘಟ್ಟ. ಹಾಗಾಗಿ ಅವರಿಗೆ ಗುಣಮಟ್ಟದ ಶಿಕ್ಷಣ ಕೊಡುವುದು ನಮ್ಮ ಕರ್ತವ್ಯ. ಪ್ರಸ್ತುತ ಕಾಲಘಟ್ಟಗಳಲ್ಲಿ ಸರ್ಕಾರಿ ಶಾಲೆಗಳು ಸೋತರೆ ಅದು ಶ್ರೀಸಾಮಾನ್ಯನ, ಗ್ರಾಮೀಣ ಸಂಸ್ಕೃತಿಯ ಸೋಲು. ನಾವು ಯಾವುದೇ ಸರ್ಕಾರಿ ಶಾಲೆ ಸೋಲದಂತೆ ನೋಡಿಕೊಳ್ಳಬೇಕು. ಅದಕ್ಕಾಗಿ ಶಿಕ್ಷಕರು, ಸರ್ಕಾರಿ ಇಲಾಖೆಗಳು ಹೊಸತನದನ್ನು ಕಲಿತು ಕಾಲ ಕಾಲಕ್ಕೆ ಬದಲಾವಣೆಗಳನ್ನು ಸ್ವಾಗತಿಸುವುದು ಆಗುವುದು ಮುಖ್ಯ. ವ್ಯಾಪಾರಿಕರಣವಾದ ವಿದ್ಯಾ ಸಂಸ್ಥೆಗಳು ಕಡೆಗೆ ಸರ್ಕಾರ ಗಮನಹರಿಸಿ, ಗ್ರಾಮೀಣ ಮಕ್ಕಳಿಗೆ ಬಾಳಿಗೆ ಶಿಕ್ಷಣ ಸಂಸ್ಥೆಗಳು ದಾರಿ ದೀಪವಾಗಬೇಕು ಎಂದರು.

Edited By : PublicNext Desk
Kshetra Samachara

Kshetra Samachara

11/09/2022 07:32 pm

Cinque Terre

554

Cinque Terre

0

ಸಂಬಂಧಿತ ಸುದ್ದಿ