ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕೃಷ್ಣಾಪುರ:ತುಳು ನಾಡಿನ ಸಂಸ್ಕøತಿ ಸಂಸ್ಕಾರದ ಪರಿಚಯ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು - ದಯಾನಂದ ಕತ್ತಲಸಾರ್

ಕೃಷ್ಣಾಪುರ: ತುಳು ನಾಡಿನ ಸಂಸ್ಕøತಿ ಸಂಸ್ಕಾರದ ಪರಿಚಯ ಪ್ರತಿಯೊಬ್ಬರೂ ಅರಿತುಕೊಳ್ಳಬೇಕು, ಹಬ್ಬ ಹರಿದಿನಗಳ ವಿಶೇಷತೆ ತಿಳಿದು ಆಚರಿಸಿ ಧರ್ಮ ಪಾಲಿಸಿರಿ ಎಂದು ಕರ್ನಾಟಕ ತುಳು ಸಾಹಿತ್ಯ ಆಕಾಡೆಮಿ ಆಧ್ಯಕ್ಷ ದಯಾನಂದ ಕತ್ತಲಸಾರ್ ನುಡಿದರು.

ಅವರು ಇಂದು ಕೃಷ್ಣಾಪುರ ಯುವಕ ಮಂಡಲದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕೃಷ್ಣಾಪುರ, ರಾಜ್ಯ ಪ್ರಶಸ್ತಿ ವಿಜೇತ ಯುವ ಮಂಡಲ ಕೃಷ್ಣಾಪುರ ಇವರ ಸಂಯುಕ್ತಾಶ್ರಯದಲ್ಲಿ ಗಣೇಶೋತ್ಸವ ಕಾರ್ಯಕ್ರಮದ ಪೂರ್ವಭಾವಿಯಾಗಿ ವಿದ್ಯಾರ್ಥಿ ಪ್ರತಿಭಾನ್ವೇಷನೆ - ತುಳುವ ಸಂಸ್ಕøತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಸಭಾಧ್ಯಕ್ಷತೆಯಿಂದ ಜ್ಯೋತಿಷಿ ನಾಗೇಂದ್ರ ಭಾರದ್ವಾಜ್ ಮಾತನಾಡಿ ತುಳು ಸಾಹಿತ್ಯದ ಆಭಿರುಚಿ ಮೂಡಿಸುವ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯಲಿ ಎಂದರು. ಮುಖ್ಯ ಅತಿಥಿ ಮಂಗಳೂರು ಉತ್ತರ ಮಂಡಲ ಬಿಜೆಪಿ ಅಧ್ಯಕ್ಷ ತಿಲಕ್ ರಾಜ್ ಕೃಷ್ಣಾಪುರ ಕೇಂದ್ರ ಸರಕಾರದ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಮುಂದಿನ ದಿನಗಳಲ್ಲಿ ಶಿಕ್ಷಣದ ಮಟ್ಟ ಸುಧಾರಣೆಯಾಗುವುರೊಂದಿಗೆ ಸ್ಥಳೀಯ ಸಂಸ್ಕಂತಿ ಪ್ರತಿಭೆಗಳಿಗೆ ಹೆಚ್ಚಿನ ಪ್ರೋತ್ಸಾಹ ದೊರೆಯಲಿದೆ ಎಂದರು.

ಮನಪಾ ಸದಸ್ಯೆ ಲಕ್ಷ್ಮೀ ಶೇಖರ ದೇವಾಡಿಗ, ಕೃಷ್ಣಾಪುರ ವಿಶ್ವನಾಥ ದೇವಸ್ಥಾನದ ವ್ಯ.ಸ. ಅಧ್ಯಕ್ಷ ಲಕ್ಷ್ಮೀಶ್ ದೇವಾಡಿಗ, ತುಳು ಸಾಹಿತ್ಯ ಆಕಾಡೆಮಿ ಸದಸ್ಯ ನಾಗೇಶ್ ಕುಲಾಲ್, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ದುರ್ಗಾಪ್ರಸಾದ್ ಹೊಳ್ಳ, ಎನ್ ಎಮ್ ಪಿ ಟಿ ಮಾಜಿ ಟ್ರಸ್ಟಿ ಪಿ ಸುಧಾಕರ್ ಕಾಮತ್, ಯುವಕ ಮಂಡಲದ ಅಧ್ಯಕ್ಷ ಶಿವಪ್ರಸಾದ್ ಬೊಳ್ಳಾಜೆ ವೇದಿಕೆಯಲ್ಲಿ ಉಪಸ್ಥಿತರಿದ್ದು ಶುಭ ಹಾರೈಸಿದರು.

ರಾಕೇಶ್ ಕೋಟ್ಯಾನ್ ಸ್ವಾಗತಿಸಿ ನಿರೂಪಿಸಿದರು. ಬಿ ಮನಮೋಹನ್ ವಂದಿಸಿದರು. ಅಶೋಕ್ ಕೃಷ್ಣಾಪುರ, ಭರತ್ ರಾಜ್ ಕೃಷ್ಣಾಪುರ, ಮಾಧವ ಬಂಗೇರಾ, ಭರತ್ ಕುಮಾರ್, ಪ್ರಶಾಂತ್ ಆಚಾರ್ಯ, ಲೀಲಾಧರ ಬಿ ಮೂಲ್ಯ, ಪ್ರಶಾಂತ್ ಅಚಾರ್ಯ, ಆಣ್ಣಪ್ಪ ದೇವಾಡಿಗ, ಸೂರಜ್ ರೈ ನಿರಂಜನ್ ಮುಂತಾದವರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

29/08/2022 09:18 pm

Cinque Terre

1.13 K

Cinque Terre

0

ಸಂಬಂಧಿತ ಸುದ್ದಿ