ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

48ನೇ ರಾಷ್ಟ್ರೀಯ ಜೂನಿಯರ್ ಬಾಲಕಿಯರ ಕಬಡ್ಡಿ ಪಂದ್ಯಾಟದ ಕರ್ನಾಟಕವನ್ನು ಪ್ರತಿನಿಧಿಸುವ ತಂಡದ ಅಂತಿಮ ಪಟ್ಟಿ ಪ್ರಕಟ

ಮೂಡುಬಿದಿರೆ: ಆಗಸ್ಟ್ 17ರಿಂದ 27 ರವರಿಗೆ ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ಕಬಡ್ಡಿ ತರಬೇತಿ ಶಿಬಿರವನ್ನು ಆಯೋಜಿಸಲಾಗಿತ್ತು. ಬಿಹಾರದ ಪಟ್ನಾದಲ್ಲಿರುವ ಪಾಟಲಿಪುತ್ರ ಕ್ರೀಡಾಂಗಣದಲ್ಲಿ ಸೆಪ್ಟೆಂಬರ್ 1 ರಿಂದ 4ರವರೆಗೆ ನಡೆಯುವ ಕಬಡ್ಡಿ ಪಂದ್ಯಾಟದಲ್ಲಿ 12 ವಿದ್ಯಾರ್ಥಿನಿಯರು ಕರ್ನಾಟಕವನ್ನು ಪ್ರತಿನಿಧಿಸಲು ಆಯ್ಕೆಯಾಗಿದ್ದಾರೆ.

ತಂಡದ ನಾಯಕಿಯಾಗಿ ಲಿಖಿತ(ದ. ಕ ) ಶಾಂತ ಭಾಯಿ (ವಿಜಯಪುರ), ಅಕ್ಷತಾ (ದ. ಕ) ,ಸುಶ್ಮಿತಾ (ಬೆಳಗಾಂ), ಸಹನಾ (ಉಡುಪಿ), ಸಿಂಧು (ರಾಮನಗರ),ಸವಿತಾ (ವಿಜಯಪುರ),ಲಲಿತಾ (ಬೆಳಗಾಂ), ಮಹಿಮಾ (ಬೆಂಗಳೂರು) ,ಶಿಲ್ಪ (ಬೆಂಗಳೂರು), ಕೀರ್ತನಾ (ಬೆಂಗಳೂರು), ಸುಚಿತ್ರ (ಬಾಗಲಕೋಟೆ), ತರಬೇತುದಾರರಾಗಿ ಹಂಸಾವತಿ ಸಿ. ಹೆಚ್ ಹಾಗೂ ವ್ಯವಸ್ಥಾಪಕರಾಗಿ ರೂಪಶ್ರೀ ಆಯ್ಕೆಯಾಗಿದ್ದಾರೆ.

Edited By : PublicNext Desk
Kshetra Samachara

Kshetra Samachara

27/08/2022 06:31 pm

Cinque Terre

500

Cinque Terre

0

ಸಂಬಂಧಿತ ಸುದ್ದಿ