ಮೂಡುಬಿದಿರೆ: ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಪುತ್ತಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಹಿನ್ನಲೆಯಲ್ಲಿ, ಹರ್ ಘರ್ ತಿರಂಗಾ ಅಭಿಯಾನದ ಭಾಗವಾಗಿ ಮನೆ ಮನೆಗೆ ತ್ರಿವರ್ಣ ಧ್ವಜವನ್ನು ಹಸ್ತಂತರಿಸಲಾಯಿತು.
ಪುತ್ತಿಗೆ ಗ್ರಾಮ ಪಂಚಾಯತ್‌ನ ಆವರಣದಲ್ಲಿ ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಚರ‍್ಯ ಪ್ರೋ ಸದಾಕತ್, ತ್ರಿವರ್ಣ ಧ್ವಜವನ್ನು ಪಂಚಾಯತಿ ಅಧ್ಯಕ್ಷರಾದ ಪ್ರವೀಣ ಶೆಟ್ಟಿಯವರಿಗೆ, ಕಾಮಾರ್ಸ ಡೀನ್ ಪ್ರಶಾಂತ ಎಂಡಿ, ಪಿಡಿಒ ಬೀಮಾ ನಾಯಕ್‌ರವರಿಗೆ, ಶೆಲೆಟ್ ಮೋನಿಸ್ ಉಪಾಧ್ಯಕ್ಷೆ ತಹೀರಾ ಬಾನುರವರಿಗೆ ಸಾಂಕೇತಿಕವಾಗಿ ಹಸ್ತಾಂತರಿಸಿದರು. ವಿದ್ಯಾರ್ಥಿಗಳು, ಉಪನ್ಯಾಸಕರು ಹಾಗೂ ಪಂಚಾಯತಿಯ ಸದಸ್ಯರು ಮನೆ ಮನೆಗೆ ಧ್ವಜವನ್ನು ನೀಡಲು ಸಹಕರಿಸಿದರು. ಈ ಕರ‍್ಯಕ್ರಮದಲ್ಲಿ ಪುತ್ತಿಗೆ ಗ್ರಾಮದ ೩೦೦ಕ್ಕೂ ಅಧಿಕ ಮನೆಗಳಿಗೆ ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ತ್ರಿವರ್ಣ ಧ್ವಜವನ್ನು ನೀಡಲಾಯಿತು. ಪ್ರತಿ ಮನೆಯವರಿಗೂ ಹರ್ ಘರ್ ತಿರಂಗಾ ಅಭಿಯಾನದ ಕುರಿತು ಹಾಗೂ ರಾಷ್ಟç ಧ್ವಜಾರೋಹಣ ಹಾಗೂ ಅವರೋಹಣದ ಸಂಧರ್ಭದಲ್ಲಿ ಅನುಸರಿಸಬೇಕಾದ ಕ್ರಮಗಳನ್ನು ತಿಳಿಸಲಾಯಿತು.
ಪುತ್ತಿಗೆ ಗ್ರಾಮ ಪಂಚಾಯತಿ ಪಿಡಿಒ ಬೀಮಾ ನಾಯಕ್, ಉಪಾಧ್ಯಕ್ಷೆ ತಹೀರಾ ಬಾನು, ಆಳ್ವಾಸ್ ಪದವಿಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಸಂಯೋಜಕಿ ಶಲೆಟ್ ಮೋನಿಸ್, ಆಳ್ವಾಸ್ ಪ.ಪೂ ಕಾಲೇಜಿನ ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂಡಿ ಉಪಸ್ಥಿತರಿದ್ದರು. ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಂಸ್ಕೃತ ಉಪನ್ಯಾಸಕ ಅಂಬರೀಷ್ ಚಿಪ್ಳೂಣಕರ್ ಸ್ವಾಗತಿಸಿ, ಕರ‍್ಯಕ್ರಮ ನಿರ್ವಹಿಸಿದರು.
Kshetra Samachara
12/08/2022 02:36 pm