ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಆರೋಗ್ಯವಂತ ಶಿಶುಗಳ ಪ್ರದರ್ಶನ ಮತ್ತು ಸ್ತನ್ಯಪಾನದ ಮಹತ್ವದ ಬಗ್ಗೆ ಜಾಗೃತಿ

ಮೂಡುಬಿದಿರೆ: ವಿಶ್ವ ಸ್ತನ್ಯಪಾನ ಸಪ್ತಾಹದಂಗವಾಗಿ ದ.ಕ.ಜಿ.ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮಂಗಳೂರು, ಇನ್ನರ್‌ವೀಲ್ ಕ್ಲಬ್‌ ಮೂಡುಜದಿರೆ ಮತ್ತು ಸಮುದಾಯ ಆರೋಗ್ಯ ಕೇಂದ್ರದ ಸಂಯುಕ್ತ ಆಶ್ರಯದಲ್ಲಿ ಆರೋಗ್ಯವಂತ ಶಿಶುಗಳ ಪ್ರದರ್ಶನ ಮತ್ತು ಸ್ತನ್ಯಪಾನದ ಮಹತ್ವದ ಬಗ್ಗೆ ಜಾಗೃತಿ ಕಾರ್ಯಕ್ರಮವು ಮಂಗಳವಾರ ಸಮಾಜ ಮಂದಿರದಲ್ಲಿ ನಡೆಯಿತು.

ಮೂಡುಬಿದಿರೆ ಸಮುದಾಯ ಆರೋಗ್ಯ ಕೇಂದ್ರದ ಆಡಳತ ವೈದ್ಯಾಧಿಕಾರಿ ಡಾ.ಚಿತ್ರಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಮಾತನಾಡಿ ಸ್ತನಗಳ ಬಗ್ಗೆ ಮಹಿಳೆಯರಿಗೆ ಜಾಗೃತಿ ಇರಬೇಕು. ಮಹಿಳೆಯರು ನಾಚಿಕೆ ಪಡದೆ ತಿಂಗಳ ಮುಟ್ಟಾದ ೫ ೭ ದಿನಗಳ ನಂತರ ಒಂದು ಸಲ ವೈದ್ಯರನ್ನು ಭೇಟಿ ಮಾಡಿ ತಪಾಸಣೆ ಮಾಡಿಸಿಕೊಳ್ಳಬೇಕು ಇದರಿಂದ ಸ್ತನ ಕ್ಯಾನ್ಸರನ್ನು ತಡೆಗಟ್ಟಲು ಸಾಧ್ಯವಿದೆ ಎಂದು ಸಲಹೆ ನೀಡಿದರು.

ಇನ್ನರ್‌ಪೀಲ್‌ ಕ್ಲಬ್‌ನ ಅಧ್ಯಕ್ಷ ರಮ್ಯಾ ವಿಕಾಸ್ ಜೈನ್‌ ಅಧ್ಯಕ್ಷತೆ ವಹಿಸಿದ್ದರು. ಸಮುದಾಯ ಆರೋಗ್ಯ ಕೇಂದ್ರದ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ಇನ್ನರ್ ವೀಲ್ ಕ್ಲಬ್‌ನ ಮಾಜಿ ಅಧ್ಯಕ್ಷರುಗಳಾದ ಜಯಶ್ರೀ ಅಮರನಾಥ ಶೆಟ್ಟಿ, ಕಲಾವತಿ, ಶಿವಾ ಶರೀಫ್, ಜ್ಯೋತಿ ಪೈ ಚಂದ್ರಿಕಾ ಮಲ್ಯ, ಯಾಸ್ಮಿನ್, ರತ್ನ ಪಾರಡ್ಕ‌, ಸದಸ್ಯ ಸ್ವರ್ಣಲತಾ, ಡಾ.ಶುದ್ಧಿ, ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಮೀನಾಕ್ಷಿ ಮತ್ತಿತರ ಸದಸ್ಯರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

10/08/2022 01:00 pm

Cinque Terre

994

Cinque Terre

0

ಸಂಬಂಧಿತ ಸುದ್ದಿ