ಮೂಡುಬಿದಿರೆ : ಇಟ್ಟಿಗೆ, ಮರಳು ಮತ್ತು ಸಿಮೆಂಟಿನಿಂದ ಪಕ್ಷವನ್ನು ಕಟ್ಟಲು ಸಾಧ್ಯವಿಲ್ಲ. ಉನ್ನತ ಮಟ್ಟದಲ್ಲಿ ಪಕ್ಷವನ್ನು ಕಟ್ಟಲು ಮತ್ತು ಮತ ಬ್ಯಾಂಕ್ ಪರಿವರ್ತನೆಯಾಗಬೇಕಾದರೆ ಜನ ಸ್ಪಂದನೆ ಅಗತ್ಯ ಎಂದು ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ ಹೇಳಿದರು.
ಅವರು ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ವತಿಯಿಂದ ಸಮಾಜ ಮಂದಿರದಲ್ಲಿ ಗುರುವಾರ ನಡೆದ ಪುತ್ತಿಗೆ ಜಿ.ಪಂ.ಕ್ಷೇತ್ರದ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಮಾತನಾಡಿದರು. ಸರಕಾರಗಳು ಗ್ರಾ.ಪಂಗಳ ಮೂಲಕ 42 ವಿವಿಧ ಸೇವೆಗಳನ್ನು ನೀಡುತ್ತಿದ್ದು ಅವುಗಳನ್ನು ಜನ ಸಾಮಾನ್ಯರಿಗೆ ಮುಟ್ಟಿಸುವಂತಹ ಕೆಲಸಗಳನ್ನು ಮಾಡಬೇಕಾಗಿದೆ. 64 ಗ್ರಾ.ಪಂಗಳಲ್ಲಿ ಕಾಂಗ್ರೆಸ್ ಪಕ್ಷದ ಸದಸ್ಯರುಗಳಿಲ್ಲ ಆದರೆ ಇಲ್ಲಿ ನಮ್ಮ ಮತದಾರರಿದ್ದಾರೆ ಆದರೆ ಅವರಿಗೆ ಸರಕಾರದ ಸೌಲಭ್ಯಗಳು ತಲುಪುತ್ತಿಲ್ಲ ಇದಕ್ಕೆ ಪರಿಹಾರ ಕಂಡುಕೊಳ್ಳುವುದು ಅನಿವಾರ್ಯವಾಗಿದೆ. ಚುನಾವಣೆಯ ಸಂದರ್ಭದಲ್ಲಿ ನಮ್ಮಲ್ಲಿ ಅಭ್ಯರ್ಥಿಗಳೇ ಸಿಗುವುದಿಲ್ಲ. ಆಗ ನಾವು ಎಲ್ಲಿಂದಲೋ ಅಭ್ಯರ್ಥಿಗಳನ್ನು ತಂದು ಚುನಾವಣೆಗೆ ನಿಲ್ಲಿಸುತ್ತೇವೆ ಅವರಿಗೆ ಪಕ್ಷದ ಸಿದ್ಧಾಂತವೇ ಗೊತ್ತಿರುವುದಿಲ್ಲ ಅಲ್ಲದೆ ಚುನಾವಣೆಯಲ್ಲಿ ಗೆದ್ದ ನಂತರ ಇನ್ನೊಂದು ಪಕ್ಷಕ್ಕೆ ಸೇರ್ಪಡೆಯಾಗುತ್ತಾರೆ ಇದು ಆಗಬಾರದು. ಗ್ರಾ.ಪಂ, ತಾ.ಪಂ. ಚುನಾವಣೆಗಳಲ್ಲಿ ಸ್ಪರ್ಧಿಸಿ ಸೋತಿರುವ ಅಭ್ಯರ್ಥಿಗಳನ್ನು ಮತ್ತೆ ವಿಶ್ವಾಸಕ್ಕೆ ತೆಗೆದುಕೊಂಡು ಅವರಿಗಾಗಿ ಕಾರ್ಯಾಗಾರಗಳನ್ನು ಮಾಡಬೇಕು ಹಾಗೂ ಸಾಮಾಜಿಕವಾಗಿ, ಧಾರ್ಮಿಕವಾಗಿ ಗ್ರಾಮ ಮಟ್ಟಗಳಲ್ಲಿ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಮೂಲಕ ಪಕ್ಷವನ್ನು ಸಂಘಟಿಸಬೇಕು ಎಂದು ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್ ರಾಜ್ ಘಟಕದ ಅಧ್ಯಕ್ಷ ಸುಭಾಶ್ಚಂದ್ರ ಶೆಟ್ಟಿ ಮಾತನಾಡಿ ಪಂಚಾಯತ್ ಮಟ್ಟದಲ್ಲಿ ಮತದಾರರನ್ನು ಯಾವ ರೀತಿ ಸೆಳೆಯಬೇಕೆಂಬುದರ ಬಗ್ಗೆ ಮಾಹಿತಿ ನೀಡಿದರು.
ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಕೆ.ಪಿ.ಸಿ.ಸಿ.ಪ್ರಧಾನ ಕಾರ್ಯದರ್ಶಿ ಮಿಥುನ್ ರೈ, ಯುವ ಕಾಂಗ್ರಸ್ ಅಧ್ಯಕ್ಷ ಜಯಕುಮಾರ್ ಶೆಟ್ಟಿ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಸುಪ್ರಿಯಾ ಡಿ.ಶೆಟ್ಟಿ ಉಪಸ್ಥಿತರಿದ್ದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಲೇರಿಯನ್ ಸಿಕ್ವೇರಾ ಸ್ವಾಗತಿಸಿದರು. ವಕ್ತಾರ ರಾಜೇಶ್ ಕಡಲಕೆರೆ ಕಾರ್ಯಕ್ರಮ ನಿರೂಪಿಸಿದರು.
ಹೊಸಬೆಟ್ಟು ಗ್ರಾ.ಪಂಚಾಯತ್ ಕಟ್ಟಡ ನಿರ್ಮಾಣಕ್ಕೆ ಮಂಜೂರಾಗಿರುವ ಜಾಗವು ಡೀಮ್ಡ್ ಫಾರೆಸ್ಟ್ ಆಗಿರುವುದರಿಂದ ಪಂಚಾಯತ್ ಕಟ್ಟಡಕ್ಕೆ ಜಾಗವಿಲ್ಲ ಆದ್ದರಿಂದ ಬೇರೆ ಜಾಗವನ್ನು ಒದಗಿಸಿಕೊಡಿ ಎಂದು ತಾ.ಪಂ ಮಾಜಿ ಸದಸ್ಯೆ ರೀಟಾ ಕುಟಿನ್ಹಾ,
ರಾಷ್ಟಿçÃಯ ಕುಟುಂಬ ಪರಿಹಾರ ನಿಧಿಯನ್ನು 20,000ದಿಂದ 1 ಲಕ್ಷಕ್ಕೆ ಏರಿಸುವಂತೆ ತೆಂಕಮಿಜಾರು ಗ್ರಾ.ಪಂನ ಮಾಜಿ ಅಧ್ಯಕ್ಷ ಬಾಲಕೃಷ್ಣ ದೇವಾಡಿಗ, ಹೊಸಬೆಟ್ಟು ಪಂಚಾಯತ್ ವ್ಯಾಪ್ತಿಯಲ್ಲಿ ಈ ಹಿಂದೆ 5 ಎಕ್ರೆ ಜಾಗವನ್ನು ಮೀಸಲಿಡಲಾಗಿದೆ. 60,70 ಜನರಿಗೆ ಹಕ್ಕುಪತ್ರವನ್ನು ನೀಡಲಾಗಿದೆ. ಆದರೆ ಜಾಗ ಡೀಮ್ಡ್ ಪಾರೆಸ್ಟ್ ಎಂದು ಗುರುತಿಸುವುದರಿಂದ 4 ವರ್ಷದಿಂದ ಜಾಗವನ್ನು ಅವರ ಹೆಸರಿಗೆ ಮಾಡಿಕೊಡಲಾಗಿಲ್ಲ ಈ ಬಗ್ಗೆ ತಾವು ವಿಧಾನ ಪರಿಷತ್‌ನಲ್ಲಿ ಮಾತನಾಡಬೇಕು,15ನೇ ಹಣಕಾಸು ಯೋಜನೆಯಿಂದ ಬರುವ ಅನುದಾನ ಎಲ್ಲಾ ಮೆಸ್ಕಾಂ ಬಿಲ್ಲ್ ಗೆ ಹೋಗುತ್ತಿದೆ ಬಗ್ಗೆ ಕ್ರಮಕೈಗೊಳ್ಳಬೇಕು ತಾವು ಪ್ರಸ್ತಾಪ ಮಾಡುವ ರಾಜ್ಯ ಕಂಬಳ ಸಮಿತಿಯು ಪಾರದರ್ಶಕವಾಗಿ ಆಗಬೇಕು. ಕಂಬಳ ಕ್ರೀಡೆಗೆ ಬೇಕಾದಷ್ಟು ಅನುದಾನವನ್ನು ತಾವು ಭರಿಸಬೇಕು ಎಂದು ಹೊಸಬೆಟ್ಟು ಗ್ರಾ.ಪಂನ ಮಾಜಿ ಅಧ್ಯಕ್ಷ ಚಂದ್ರಹಾಸ ಸನಿಲ್ ಹಾಗೂ ಪುತ್ತಿಗೆ ಗ್ರಾ.ಪಂನ ಅಧ್ಯಕ್ಷ ಪ್ರವೀಣ್ ಶೆಟ್ಟಿ ಮಾತನಾಡಿ ಮನೆ ಮನೆಗೆ ಕುಡಿಯುವ ನೀರು ಒದಗಿಸುವ ನಿಟ್ಟಿನಲ್ಲಿ ಸರಕಾರವು ಪ್ರತ್ಯೇಕ ಟಿ.ಸಿಯನ್ನು ಅಳವಡಿಸಲು ಆದೇಶ ಹೊರಡಿಸಿದೆ ಇದು ಪಂಚಾಯತ್‌ಗೆ ಹೊರೆಯಾಗುತ್ತಿದೆ ಆದ್ದರಿಂದ ಪಂಚಾಯತ್‌ಗೆ ಉಚಿತವಾಗಿ ಟಿ.ಸಿಯನ್ನು ಅಳವಡಿಸಬೇಕು ಎಂದು ಆಗ್ರಹಿಸಿದರು. ಈ ಬಗ್ಗೆ ಗಮನ ಹರಿಸುವುದಾಗಿ ಮಂಜುನಾಥ ಭಂಡಾರಿ ತಿಳಿಸಿದರು.
Kshetra Samachara
14/07/2022 09:07 pm