ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಗುರುಪುರ : ಮೋರಿ, ರಸ್ತೆ ಕುಸಿತ ಭೀತಿ, ತಡೆಗೋಡೆ ದುರಸ್ತಿಗೆ ಆಗ್ರಹ

ಬಜಪೆ : ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಅಣೆಬಳಿಯ ಕಡಿದಾದ ತಿರುವುಗಳಲ್ಲಿ ಈಗಾಗಲೇ ಸಂಭವಿಸಿದ ಮೂರು ಘನ ವಾಹನ ಅಪಘಾತಗಳ ಸಂದರ್ಭದಲ್ಲಿ ರಸ್ತೆ ಬದಿಯ ತಡೆಗೋಡೆ ಕುಸಿದಿದ್ದು, ಮಳೆಗಾಲದಲ್ಲಿ ಆ ಪ್ರದೇಶದಲ್ಲಿ ತೀವ್ರ ಗುಡ್ಡ ಕುಸಿತ ಉಂಟಾಗಿದೆ. ಅಲ್ಲದೆ ಹೆದ್ದಾರಿಯ ಬೃಹತ್ ಮೋರಿಗಳು ಬಿರುಕು ಬಿಟ್ಟಿದೆ. ಇಳಿಜಾರಿನಲ್ಲಿ ಹೆದ್ದಾರಿ ಕುಸಿತಕ್ಕೊಳಗಾಗಿ ಹೆದ್ದಾರಿಯಲ್ಲಿ ಸಂಚರಿಸುವಂತಹ ವಾಹನ ಸವಾರರಿಗೆಅಪಾಯಕಾರಿಯಾಗಿ ಪರಿಣಮಿಸಿದೆ.

ಹೆದ್ದಾರಿಯ ಇಳಿಜಾರು ಪ್ರದೇಶದಲ್ಲಿರುವ ಕಡಿದಾದ ತಿರುವಿನಲ್ಲಿ ಇತ್ತೀಚೆಗೆ ಮೂರು ಘನ ವಾಹನಗಳು ಉರುಳಿ ಬಿದ್ದಿದೆ.ತಿರುವಿನಲ್ಲಿ ಸಣ್ಣಪುಟ್ಟ ರಸ್ತೆ ಅಪಘಾತಗಳು ಸಾಮಾನ್ಯವಾಗಿ ಬಿಟ್ಟಿವೆ. ಇಲ್ಲಿ ದಾರಿದೀಪಗಳಿಲ್ಲ. ಒಂದೆರಡು ದೊಡ್ಡ ಮೋರಿಗಳ ಅಡಿಭಾಗದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಧಾರಾಕಾರ ಮಳೆಗೆ ರಸ್ತೆ ಪಕ್ಕದಲ್ಲಿ ಗುಡ್ಡದ ಮಣ್ಣು ಇನ್ನಷ್ಟು ಆಳಕ್ಕೆ ಕುಸಿಯಲಾರಂಭಿಸಿದೆ. ಸಮೀಪದಲ್ಲಿ ಕೆಲ ಮನೆಗಳಿದ್ದು, ಅಪಾಯ ಎದುರಿಸುವಂತಾಗಿದೆ. ರಸ್ತೆಯ ಅಡಿಭಾಗದಲ್ಲಿ ಮಣ್ಣಿನ ಸವೆತ ಹೆಚ್ಚಾಗಿ ಹೆದ್ದಾರಿಯ ಕೆಲವೆಡೆ ಇಳಿಜಾರಂತಾಗಿ, ಸಣ್ಣ ಬಿರುಕು ಸೃಷ್ಟಿಯಾಗಿದೆ.

ಈ ಬಗ್ಗೆ ಎನ್‍ಎಚ್‍ನ ಮಂಗಳೂರು ವಿಭಾಗ ಹಾಗೂ ಪಿಡಬ್ಲ್ಯೂಡಿಗೆ ದೂರು ನೀಡಿದರೆ, ಎನ್‍ಎಚ್ ವಿಸ್ತರಣೆ ಕಾರಣ ಮುಂದಿಟ್ಟು `ಕೇಂದ್ರ ಆದೇಶ ಸಿಕ್ಕರೆ ದುರಸ್ತಿ ಸಾಧ್ಯ' ಎನ್ನುವ ಉತ್ತರ ಸಿಗುತ್ತಿದೆ ಎಂದು ಸ್ಥಳೀಯರು ಹಾಗೂ ಜನಪ್ರತಿನಿಧಿಗಳು ಬೇಸರ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ದುರಸ್ತಿ ಕಾರ್ಯದ ಬಗ್ಗೆ ಸಂಬಂಧಪಟ್ಟವರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

Edited By : PublicNext Desk
Kshetra Samachara

Kshetra Samachara

01/07/2022 12:58 pm

Cinque Terre

1.5 K

Cinque Terre

0

ಸಂಬಂಧಿತ ಸುದ್ದಿ