ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಬಜಪೆ:ಎಸ್.ಡಿ.ಪಿ.ಐ ಸಂಸ್ಥಾಪನಾ ದಿನದ ಅಂಗವಾಗಿ ಅನಾಥ ಆಶ್ರಮಕ್ಕೆ ಆಹಾರ ವಿತರಣೆ

ಬಜಪೆ:ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಇದರ ಸಂಸ್ಥಾಪನಾ ದಿನದ ಅಂಗವಾಗಿ ಬಜ್ಪೆ ಪಟ್ಟಣ ಪಂಚಾಯತ್ ಸಮಿತಿ ವತಿಯಿಂದ ಪೊರ್ಕೊಡಿ ಅನಾಥ ಅಶ್ರಮಕ್ಕೆ ತೆರಲಿ ಬಾಡೂಟವನ್ನು ನೀಡಿ ಸಂಸ್ಥಾಪನಾ ದಿನವನ್ನು ವಿಶೇಷ ವಾಗಿ ಆಚರಿಸಲಾಯಿತು.ಅನಾಥ ಅಶ್ರಮದಲ್ಲಿನ 41 ನಿರ್ಗತಿಕ ಬಡವರಿಗೆ ಬಿರಿಯಾನಿ ರಸದೌತಣವನ್ನು ನೀಡಿ ಅವರೊಂದಿಗೆ ಪಕ್ಷದ ದಿನವನ್ನು ಸಂಭ್ರಮಿಸಲಾಯಿತು.

ಈ ಸಂಧರ್ಭದಲ್ಲಿ ಬಜ್ಪೆ ಪಟ್ಟಣ ಪಂಚಾಯತ್ ಸಮಿತಿ ಅದ್ಯಕ್ಷ ಇಸ್ಮಾಯಿಲ್ ಇಂಜಿನಿಯರ್, ಮೂಡಬಿದ್ರೆ ವಿಧಾನಸಭಾ ಉಪಾದ್ಯಕ್ಷ ನಿಸಾರ್ ಮರವೂರು, ಬಜ್ಪೆ ಪಟ್ಟಣ ಪಂಚಾಯತ್ ಸಮಿತಿ ಕಾರ್ಯದರ್ಶಿ ಅಲ್ತಾಫ್ ಪೊರ್ಕೊಡಿ, ಸಮಿತಿ ಸದಸ್ಯರಾದ ರಹೀಂ ಜರಿ, ಮನ್ಸೂರ್ ಕಿನ್ನಿಪದವು, ಅನಾಥ ಆಶ್ರಮ ಸಿಬ್ಬಂದಿಗಳು ಮತ್ತು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.

Edited By : PublicNext Desk
Kshetra Samachara

Kshetra Samachara

21/06/2022 09:29 pm

Cinque Terre

1.2 K

Cinque Terre

1

ಸಂಬಂಧಿತ ಸುದ್ದಿ