ಬಜಪೆ:ಭಾರತೀಯ ಜನತಾ ಪಾರ್ಟಿಯ ಎಕ್ಕಾರು ಮಹಾಶಕ್ತಿ ಕೇಂದ್ರದ ವತಿಯಿಂದ ಪ್ರಧಾನಿ ಶ್ರೀ ನರೇಂದ್ರ ಮೋದಿಜೀಯವರ 8 ವರ್ಷಗಳ ಆಡಳಿತ ಪೂರೈಸಿದ ಪ್ರಯುಕ್ತ ಎಕ್ಕಾರು ಮಹಾಶಕ್ತಿ ಕೇಂದ್ರ ವ್ಯಾಪ್ತಿಯಲ್ಲಿ 550 ಕ್ಕೂ ಅಧಿಕ ಅಂಕ ಪಡೆದ 55 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಎಕ್ಕಾರು ಬಂಟರ ಭವನದಲ್ಲಿ ಶುಕ್ರವಾರದಂದು ಸಂಜೆ ನಡೆಯಿತು.ಕಾರ್ಯಕ್ರಮವನ್ನು ಮೂಲ್ಕಿ ಮೂಡಬಿದಿರೆ ಶಾಸಕ ಉಮಾನಾಥ್ ಕೋಟ್ಯಾನ್ ಅವರು ದೀಪ ಬೆಳಗಿಸಿ ಉದ್ಘಾಟಿಸಿ ಮಾತನಾಡಿದರು.
ಈ ಸಂಧರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಈಶ್ವರ ಕಟೀಲ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶ್ರೀಮತಿ ಕಸ್ತೂರಿ ಪಂಜ, ಮಂಡಲ ಉಪಾಧ್ಯಕ್ಷೆ ಶಾಂಭವಿ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕೇಶವ ಕರ್ಕೇರ, ಗೋಪಾಲ್ ಶೆಟ್ಟಿಗಾರ್, ಮಹಾಶಕ್ತಿಕೇಂದ್ರ ಅಧ್ಯಕ್ಷ ಸುಂದರ ಪೂಜಾರಿ, ಪ್ರಧಾನ ಕಾರ್ಯದರ್ಶಿ ಸುದೀಪ್ ಅಮೀನ್,ಎಕ್ಕಾರು ಗ್ರಾಮ ಪಂಚಾಯತ್ ಅಧ್ಯಕ್ಷೆ ಸುರೇಖಾ ರೈ ಹಾಗೂ ಪಂಚಾಯತ್ ಸದಸ್ಯರುಗಳು,ಶಕ್ತಿಕೇಂದ್ರ ಪ್ರಮುಖರುಗಳು, ಮುಖಂಡರು ಉಪಸ್ಥಿತರಿದ್ದರು.
Kshetra Samachara
17/06/2022 09:44 pm