ಬಜಪೆ: ಬಿಜೆಪಿ ಎಸ್ .ಸಿ ಮೋರ್ಚಾ ಮೂಲ್ಕಿ- ಮೂಡಬಿದಿರೆ ಮಂಡಲದ ವತಿಯಿಂದ ಪ್ರಧಾನಿ ನರೇಂದ್ರ ಮೋದಿಜೀಯವರ 8 ನೇ ವರ್ಷದ ಆಡಳಿತ ವೈಖರಿಯ ಸಂಭ್ರಮಾಚರಣೆಯನ್ನು ಸ್ನೇಹ ಭಾರತಿ ವಿದ್ಯಾಸಂಸ್ಥೆ (ರಿ)ಯ ನಮ್ಮ ಹಿರಿಯರ ಮನೆ ವೃದ್ದಾಶ್ರಮ ಪೋರ್ಕೋಡಿಯಲ್ಲಿ ಇಂದು ಆಚರಿಸಲಾಯಿತು.
ಈ ಸಂದರ್ಭ ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲ ಅಧ್ಯಕ್ಷ ಸುನೀಲ್ ಆಳ್ವ ಅವರು ಮಾತನಾಡಿದರು.
ಮೂಲ್ಕಿ ಮೂಡಬಿದಿರೆ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ಕೇಶವ ಕರ್ಕೇರಾ,ಉಪಾಧ್ಯಕ್ಷೆ ಶಾಂಭವಿ ಶೆಟ್ಟಿ,ಬಿಜೆಪಿ ಎಸ್ .ಸಿ ಮೋರ್ಚಾ ಅಧ್ಯಕ್ಷ ಆನಂದ .ಕೆ,ಉಪಾಧ್ಯಕ್ಷ ಗೋಪಾಲಕೃಷ್ಣ ಪುನರೂರು,ಪ್ರಧಾನ ಕಾರ್ಯದರ್ಶಿಗಳಾದ ವಿನಯ ಸಾಲ್ಯಾನ್,ಕಪಿಲಾ ಅಂಚನ್,ಕಾರ್ಯದರ್ಶಿ ಪ್ರಮೀಳಾ ಮೂರುಕಾವೇರಿ,ಬಿಜೆಪಿ ಜಿಲ್ಲಾ ಸಮಿತಿ ಸದಸ್ಯ ವಿನೋದ್ ಸಾಲ್ಯಾನ್ ,ಬಿಜೆಪಿ ಜಿಲ್ಲಾ ಒಬಿಸಿ ಮೋರ್ಚಾ ಅಧ್ಯಕ್ಷ ರಾಜೇಶ್ ಅಮೀನ್,ಬಿಜೆಪಿ ಜಿಲ್ಲಾ ಯುವ ಮೋರ್ಚಾ ಸದಸ್ಯ ಸತೀಶ್ ಮರವೂರು,ಮಾಜಿ ಜಿಲ್ಲಾ ಪಂಚಾಯತ್ ಸದಸ್ಯ ರೀತೇಶ್ ಶೆಟ್ಟಿ, ಬಿಜೆಪಿ ಎಸ್ .ಸಿ ಮೋರ್ಚಾ ಸದಸ್ಯರುಗಳು ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Kshetra Samachara
16/06/2022 04:50 pm